Light
Dark

ಹಿರಿಯ ನಟ ಪ್ರದೀಪ್‌ ಪಟವರ್ಧನ್‌ ಇನ್ನಿಲ್ಲ

ಮುಂಬೈ : ಮರಾಠಿ ಚಿತ್ರರಂಗದ ಹಿರಿಯ ನಟ  ಪ್ರದೀಪ್‌ ಪಟವರ್ಧನ್‌ ಅವರು ನಿಧನರಾಗಿದ್ದಾರೆ.

64 ವರ್ಷದ ನಟ ಪ್ರದೀಪ್‌ ಪಟವರ್ಧನ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದದೆಂದು ಅವರ ಕುಟುಂಬದ ಮೂಲಕಗಳು ತಿಳಿಸಿವೆ.

ಇವರ ನಿಧನಕ್ಕೆ ಚಿತ್ರರಂಗದ ಅಪಾರ ಬಳಗ ಸಂತಾಪವನ್ನು ಸೂಚಿಸಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ನಟ  ಪ್ರದೀಪ್‌ ಪಟವರ್ಧನ್‌ ಅವರು ರಂಗಭೂಮಿ ಹಿನ್ನಲೆಯಿಂದ ಬಂದವರಾಗಿದ್ದು, ಇವರು ಕಿರುತೆರೆ ಸೇರಿದಂತೆ ಹಿರಿತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದರು. ಮುಂದುವರಿದು ಬಾಲಿವುಡ್‌ ಸಿನಿಮಾಗಳಲ್ಲಿಯೂ ಕೆಲಕಾಲ ಮಿಂಚಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ