Mysore
28
overcast clouds

Social Media

ಶನಿವಾರ, 13 ಜೂನ್ 2026
Light
Dark

‘ಅವರಿಗೆ ಹೆದರಿಕೆ ಇರಬೇಕು ನಮಗ್ಯಾಕೆ ಹೆದರಿಕೆ?’ ಸಲಾರ್‌, ಡಂಕಿಗೆ ಟಾಂಗ್‌ ಕೊಟ್ರು ದರ್ಶನ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಕಾಟೇರ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಲಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯ ದೊಡ್ಡ ಸ್ಟಾರ್‌ ನಟರ ಚಿತ್ರಗಳೂ ಸಹ ಬಿಡುಗಡೆಯಾಗಲಿದ್ದು, ಕಾಟೇರ ಚಿತ್ರ ಡಿಸೆಂಬರ್‌ 29ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಣೆಯಾದಾಗ ಈ ಕುರಿತು ಚರ್ಚೆಗಳು ನಡೆದಿದ್ದವು.

ತೆಲುಗು ಸ್ಟಾರ್‌ ನಟ ಪ್ರಭಾಸ್‌ ನಟನೆಯ ಸಲಾರ್‌ ಹಾಗೂ ಹಿಂದಿಯ ಸ್ಟಾರ್‌ ನಟ ಶಾರುಖ್‌ ಖಾನ್‌ ನಟನೆಯ ಡಂಕಿ ಚಿತ್ರಗಳು ಇದೇ ತಿಂಗಳ 22ರಂದು ತೆರೆಗೆ ಬರಲಿದ್ದು, ಈ ಚಿತ್ರಗಳು ತೆರೆಕಂಡ ವಾರದ ಬಳಿಕ ಬಿಡುಗಡೆಯಾಗಲಿರುವ ಕಾಟೇರ ಚಿತ್ರದ ಮೇಲೆ ಈ ಚಿತ್ರಗಳ ಪ್ರಭಾವ ಬೀರಬಹುದು, ಬಿಡುಗಡೆಯನ್ನು ಮುಂದೂಡಿಕೊಂಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಇದೀಗ ಅಂತಹ ಅಭಿಪ್ರಾಯ ವ್ಯಕ್ತಪಡಿಸಿದವರ ಕುರಿತು ದರ್ಶನ್ ನಿನ್ನೆ ( ಡಿಸೆಂಬರ್‌ 14 ) ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. “29ಕ್ಕೆ ನಾವು ಬರೋಣ ಅಂತ ಅನ್ಕೊಂಡ್ವಿ. ನಮ್‌ ಸಿನಿಮಾ, ನಮ್‌ ಜಾಗ ಇದು. ಯಾರಿಗೋ ಹೆದರಿಕೊಂಡು ನಾವ್ಯಾಕ್‌ ಬರಬೇಕು ರೀ. ನಮ್ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕೇ ಹೊರತು ನಮಗ್ಯಾಕೆ ಹೆದರಿಕೆ? ಕನ್ನಡ ಜನರು ಇದಾರಾ ಇಲ್ವಾ ಅಂತ ನನಗೆ ಡೌಟ್‌ ಬಂದುಬಿಡ್ತು. ಆದರೆ ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಕನ್ನಡ ಜನ ಕೈಹಿಡಿದೇ ಹಿಡಿತಾರೆ. ಆಮೇಲೆ ನಾವ್‌ ಯಾವ್ದೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿಲ್ಲ, ಅಪ್ಪಟ ಕನ್ನಡ ಸಿನಿಮಾ, ಕನ್ನಡ ಜನತೆಗೋಸ್ಕರ ಮಾಡಿರೋ ಸಿನಿಮಾ ಅಂತ ಹೇಳೋಕೆ ಇಷ್ಟಪಡ್ತೀನಿ” ಎಂದು ದರ್ಶನ್‌ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!