Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ನಗ್ನ ಫೋಟೋ ಶೂಟ್‌ ಕೇಸ್‌ : ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿರುವ ರಣವೀರ್​ ಸಿಂಗ್

ಮುಂಬೈ: ನಟ ರಣವೀರ್​ ಸಿಂ​ಗ್ ಅವರಿಗೆ ಸಂಕಷ್ಟ ಎದುರಾಗಿದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ‘ಪೇಪರ್​’ ಮ್ಯಾಗಜಿನ್​ ಸಲುವಾಗಿ ಅವರು ಮಾಡಿಸಿದ ನಗ್ನ ಫೋಟೋಶೂಟ್​  ಹಲವು ವಿವಾದಕ್ಕೆ ಕಾರಣ ಆಗಿದೆ. ಈ ಫೋಟೋಶೂಟ್​ಗೆ ಸಂಬಂಧಿಸಿದಂತೆ ರಣವೀರ್​ ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಆ ಪ್ರಕರಣದ ವಿಚಾರಣೆಗೆ ಹಾಜರಾಗಲು ರಣವೀರ್​ ಸಿಂಗ್ ಈಗ​ ಹಿಂದೇಟು ಹಾಕುತ್ತಿದ್ದಾರೆ.

ಆಗಸ್ಟ್​ 22ರಂದು ಮುಂಬೈ ಪೊಲೀಸರ ಎದುರು ಅವರು ವಿಚಾರಣೆಗೆ ಒಳಪಡಬೇಕು. ಆದರೆ ಒಂದಷ್ಟು ಕಾರಣಗಳನ್ನು ನೀಡಿ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ವಿಚಾರಣೆಗೆ ಹಾಜರಾಗಲು ರಣವೀರ್​ ಸಿಂಗ್​ ಎರಡು ವಾರಗಳ ಕಾಲ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ.

ರಣವೀರ್​ ಸಿಂಗ್​ ಮಾಡಿಸಿದ ನಗ್ನ ಫೋಟೋಶೂಟ್​ನಿಂದ ಮಹಿಳೆಯರ ಗೌರವಕ್ಕೆ ಧಕ್ಕೆ ಆಗಿದೆ ಎಂದು ಆರೋಪಿಸಿ ಕೆಲವರು ದೂರು ನೀಡಿದ್ದರು. ಆ ಕುರಿತು ವಿಚಾರಣೆ ನಡೆಸುವ ಸಲುವಾಗಿ ರಣವೀರ್​ ಸಿಂಗ್​ಗೆ ಪೊಲೀಸರು ಸಮನ್ಸ್​ ನೀಡಿದ್ದರು. ಸಮನ್ಸ್​ ನೀಡಲು ಅವರ ಮನೆಗೆ ತೆರಳಿದ್ದಾಗ ಅವರು ಅಲ್ಲಿ ಇರಲಿಲ್ಲ. ಆಗಸ್ಟ್​ 22ರಂದು ಮುಂಬೈನ ಬೇಂಬೂರ್​ ಪೊಲೀಸ್​ ಠಾಣೆಗೆ ಹಾಜರಾಗುವಂತೆ ಸಮನ್ಸ್​ನಲ್ಲಿ ತಿಳಿಸಲಾಗಿತ್ತು.

ಹಲವು ಪ್ರಾಜೆಕ್ಟ್​ಗಳಲ್ಲಿ ರಣವೀರ್ ಸಿಂಗ್​ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಪೊಲೀಸರ ಎದುರು ವಿಚಾರಣೆಗೆ ಹಾಜರಾಗದಿರಲು ನೆಪ ಹೇಳಿದ್ದಾರೆ. ಆ ಮೂಲಕ ಹೊಸ ವರಸೆ ತೋರಿದ್ದಾರೆ. ಇನ್ನೂ ಎರಡು ವಾರಗಳ ಕಾಲ ಸಮಯಾವಕಾಶ ಬೇಕು ಎಂದು ಅವರು ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಹೊಸ ದಿನಾಂಕವನ್ನು ನಿಗದಿಪಡಿಸಿ, ಮತ್ತೊಮ್ಮೆ ಸಮನ್ಸ್​ ಜಾರಿಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಸಿ ಸೆಕ್ಷನ್​ 292, 293 ಹಾಗೂ 509ರ ಅಡಿಯಲ್ಲಿ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಜುಲೈ 22ರಂದು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ನಗ್ನ ಫೋಟೋಗಳನ್ನು ಶೇರ್​ ಮಾಡಿಕೊಂಡರು. ಇದನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ರಣವೀರ್​ ಸಿಂಗ್​ ಪರ ಮಾತನಾಡಿದ್ದಾರೆ. ಅಂತಿಮವಾಗಿ ಈ ಕೇಸ್​ ಏನಾಗಲಿದೆ ಎಂಬ ಕೌತುಕ ಮೂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ