Mysore
23
broken clouds

Social Media

ಭಾನುವಾರ, 20 ಏಪ್ರಿಲ 2025
Light
Dark

ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ : ರಾಧಿಕಾ ಪಂಡಿತ್

ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿಯೊಬ್ಬರೂ ಕೂಡ ಖುಷಿಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಅಂತೆಯೇ ಸ್ಯಾಂಡಲ್ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಕೂಡ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಸಂತಸದಿಂದ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ರಾಧಿಕಾ ಪಂಡಿತ್ ಹಬ್ಬದ ಆಚರಣೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬೇಳಕಿನ ಹಬ್ಬದ ಪ್ರಯುಕ್ತ ದೀಪ ಹಿಡಿದು ಪೋಟೋಗೆ ಪೋಸ್‌ ಕೊಟ್ಟಿರುವ ಸಿಂಡ್ರೆಲಾ,ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ಹಾರೈಸುತ್ತೇನೆ ಎಂದು ಅಭಿಮಾನಿಗಳಿಗೆ ಹಬ್ಬದ ಶುಭಾಷಯ ತಿಳಿಸಿದ್ದಾರೆ.

ರಾಧಿಕ ಪಂಡಿತ್‌ ಅವರು ಪ್ರತಿ ಹಬ್ಬವನ್ನೂ ಕೂಡ ಶಾಸ್ತ್ರೋಕ್ತವಾಗಿ ಆಚರಣೆ ಮಾಡಿ ಸಂಭ್ರಮಿಸುತ್ತಾರೆ. ಇದೀಗ ದೀಪಾವಳಿ ಹಬ್ಬವನ್ನೂ ಕೂಡ ಅಷ್ಟೇ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ