Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಬಿಗ್‌ಬಾಸ್‌ ಮನೆಯಿಂದ ಹೊರನಡೆವ ವರ್ತೂರ್‌ ನಿರ್ಧಾರಕ್ಕೆ ಕಿಚ್ಚ ಬೇಸರ

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 10ನ ಸ್ಪರ್ಧಿ ವರ್ತೂರ್‌ ಸಂತೋಷ್‌ ಅವರು ದೊಡ್ಮನೆಯಿಂದ ಹೊರನಡೆಯುವ ತೀರ್ಮಾನ ಮಾಡಿದ್ದಾರೆ. ಈ ನಿರ್ಧಾರದಿಂದ ಶೋ ಹೋಸ್ಟರ್‌ ಕಿಚ್ಚ ಸುದೀಪ್‌ ಬೇಸರ ಹೊರ ಹಾಕಿದ್ದು, ವೇದಿಕೆಯಿಂದಲೇ ಹೊರ ನಡೆದಿದ್ದಾರೆ.

ಹುಲಿ ಉಗುರಿನ ಪ್ರಕರಣದಲ್ಲಿ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ಬಗ್‌ಬಾಸ್‌ ಮನೆಗೆ ಬಂದಿದ್ದರು. ಬಿಗ್‌ಬಾಸ್‌ ಗೆಲ್ಲಲೇ ಬೇಕೆಂದು ಅವರ ಅಪಾರ ಅಭಿಮಾನಿ ಬಳಗ ಆಶಿಸಿತ್ತು.

ಪ್ರತಿ ವಾರದಂತೆ ಈ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ವರ್ತೂರ್‌ ಸಂತೋಷ್‌ ಅವರನ್ನು ಕಿಚ್ಚ ಸುದೀಪ್‌ ಅವರು ಸೇಪ್‌ ಎಂದು ಘೋಷಿಸಿದರು. ಅವರ ಮಾತು ಕೇಳಿ ಭಾವುಕರಾದ ಸಂತೋಷ್‌, ಹೊರಗಡೆ ಒಂದು ಘಟನೆ ನಡೆದಿದೆ. ಅದರಿಂದ ಹೊರಬಂದು ಬಿಗ್‌ಬಾಸ್‌ ಮನೆಯಲ್ಲಿ ಆಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಹೊರಗಡೆ ಇರಲು ಬಯಸುತ್ತೇನೆ ಎಂದು ಹಠ ಹಿಡಿದರು.

ಇದರಿಂದ ಬೇಸರಗೊಂಡ ಕಿಚ್ಚ ನಿಮಗೆ ಜನರು 34,15,472 ಮತಗಳನ್ನು ನೀಡಿದ್ದಾರೆ, ಆ ಜನಗಳ ವಿರುದ್ಧ ನಾನು ಹೋಗಲು ಆಗುವುದಿಲ್ಲ ನಾನು ಹೋಗುವುದು ಇಲ್ಲ. ನಿಮ್ಮಿಂದ ನನಗೆ ಬೇಸರವಾಗಿದೆ ಎಂದು ವೇದಿಕೆಯಿಂದಲೇ ಹೊರ ನಡೆದಿದ್ದಾರೆ.

ಸ್ನೇಹಿತ್‌, ನೀತು, ಇಶಾನಿ ಮತ್ತು ವರ್ತೂರ್‌ ಎಲಿಮಿನೇಷನ್‌ ಪ್ರಕ್ರಿಯೆಗೆ ನಾಮಿನಿಯಾಗಿದ್ದರು. ಇವರಲ್ಲಿ ವರ್ತೂರ್‌ ಸೇಫ್‌ ಆಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!