Light
Dark

ಒಟಿಟಿಗೆ ಕೌಸಲ್ಯಾ ಸುಪ್ರಜಾ ರಾಮ

ಶಶಾಂಕ್ ಬರೆದು ನಿರ್ದೇಶಿಸಿದ ಇತ್ತೀಚಿನ ಕನ್ನಡ ಚಲನಚಿತ್ರ ಕೌಸಲ್ಯ ಸುಪ್ರಜಾ ರಾಮ ಇದೀಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಾಗಭೂಷಣ್ ಮತ್ತು ಬೃಂದಾ ಆಚಾರ್ಯ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾ ಪುರುಷಾಹಂಕಾರವನ್ನು ಪ್ರಶ್ನಿಸುತ್ತದೆ ಮತ್ತು ರಿಯಲ್ ಪುರುಷ ಯಾರು ಎಂಬುದರ ವ್ಯಾಖ್ಯಾನದ ಒಳನೋಟವನ್ನು ನೀಡಲು ಪ್ರಯತ್ನಿಸುತ್ತದೆ. ಕೌಸಲ್ಯಾ ಸುಪ್ರಜಾ ರಾಮ ಜುಲೈ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದ ಚಿತ್ರ, ಕಮರ್ಷಿಯಲ್ ಆಗಿಯೂ ಯಶಸ್ಸು ಕಂಡಿತು.

ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ಕೌಸಲ್ಯಾ ಸುಪ್ರಜಾ ರಾಮ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಗ್ನನ್ ಛಾಯಾಗ್ರಹಣವಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ