Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

‘ಫ್ರಂಟ್‌ಲೈನ್‌’ ಮುಖಪುಟದಲ್ಲಿ ಕಾಂತಾರ ಕಲರವ

ಮೈಸೂರು: ಕನ್ನಡ ಮಣ್ಣಿನ ಕಲಾವಿದರಿಂದ ಮೂಡಿಬಂದ ಕಾಂತಾರ ಸಿನಿಮಾ 50 ದಿನಗಳು ಪೂರೈಸಿ ದೇಶಾದ್ಯಂತ ಅಬ್ಬರದಿಂದ ಮುನ್ನಡೆದಿದೆ. ರಿಷಬ್‌ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ, ತಂಡದ ಕಲಾವಿದರಿಗೆ ಅಚ್ಚರಿಯಾಗುವಂತೆ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ.

ಗಳಿಕೆಯಲ್ಲಿ ಮತ್ತು ಪ್ರದರ್ಶನದಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಿತ್ರ ಈಗ ಭಾರತದ ಯಾವ ಚಿತ್ರವೂ ಮಾಡದ ದಾಖಲೆಯೊಂದನ್ನು ಮಾಡಿದೆ. ” ದಿ ಹಿಂದೂʼ ಪತ್ರಿಕಾ ಸಮೂಹದ ಫ್ರಂಟ್‌ ಲೈನ್‌ ನಿಯತಕಾಲಿಕದ ನವೆಂಬರ್‌ ತಿಂಗಳ ಸಂಚಿಕೆಗೆ ಕಾಂತಾರ ಯಶಸ್ಸಿನ ಕಥೆಯನ್ನು ಕವರ್‌ ಸ್ಟೋರಿಯಾಗಿ ಬಳಸಿಕೊಳ್ಳಲಾಗಿದೆ. 1984ರಲ್ಲಿ ಪ್ರಾರಂಭವಾದ ಫ್ರಂಟ್‌ ಲೈನ್‌ ನಿಯತಕಾಲಿಕ ತನ್ನ 38 ವರ್ಷಗಳ ಕಾರ್ಯಾವಧಿಯಲ್ಲಿ ಯಾವುದೇ ಸಿನಿಮಾ ಸಂಬಂಧಿತ ಸುದ್ದಿಗಳನ್ನು ಇಲ್ಲವೇ ಫೋಟೋಗಳನ್ನು ತನ್ನ ಮುಖಪುಟಕ್ಕೆ ಬಳಸಿಕೊಂಡ ನಿದರ್ಶನವಿಲ್ಲ. ಹಾಗಾಗಿ ಇದು ಇಡೀ ಚಿತ್ರರಂಗಕ್ಕೆ ಹಾಗೆಯೇ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

The Kantara Phenomenon – Understanding the extraordinary success of an ordinary film (ಕಾಂತಾರ ವಿದ್ಯಮಾನ-ಸಾಮಾನ್ಯ ಚಿತ್ರದ ಅಸಾಮಾನ್ಯ ಯಶಸ್ಸನ್ನು ಅರ್ಥಮಾಡಿಕೊಳ್ಳುವುದು) ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಕಾಂತಾರದ ಚಿತ್ರದ ಯಶಸ್ಸಿಗೆ ಕಾರಣವಾದ ಅಂಶಗಳನ್ನು ವಿಶ್ಲೇಷಿಸಲಾಗಿದೆ.

ಕನ್ನಡ ಸಿನಿಮಾ ಕ್ಷೇತ್ರವನ್ನು ರಾಷ್ಟ್ರ ಮಟ್ಟಕ್ಕೆ ಒಯ್ದ ಚಿತ್ರಗಳ ಸಾಲಿಗೆ ಕಾಂತಾರವೂ ಸೇರುತ್ತದೆ. ಯಾವುದೇ ಪೂರ್ವ ತಯಾರಿಯಿಲ್ಲದೆ ಪ್ಯಾನ್‌ ಇಂಡಿಯಾ ಸಿನಿಮಾಗಳ ಗುಂಪಿಗೆ ಸೇರಿದ ಕಾಂತಾರ ಚಿತ್ರವನ್ನು ಭಾಷೆಯ ಹಂಗನ್ನು ಮೀರಿ ಇಡೀ ದೇಶದ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.

ಸ್ಟಾರ್‌ ನಟರಿಲ್ಲದ, ಗ್ರಾಫಿಕ್ಸ್‌ ಗಳ ಮಿಶ್ರಣವಿಲ್ಲದ ಚಿತ್ರವೊಂದು ಕೇವಲ ತನ್ನ ಕಥೆ ಮತ್ತು ಅದಕ್ಕೆ ಪೂರಕವಾದ ಸನ್ನಿವೇಶಗಳನ್ನು ಬಳಸಿಕೊಂಡು ಸುಂದರ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟ ಬಗೆಯನ್ನು ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!