ಮಂಡ್ಯ: ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ. ನನ್ನಲ್ಲಿ ಆ ರೀತಿಯ ಯಾವುದೇ ಯೋಚನೆ ಈಗ ಇಲ್ಲ ಎಂದು ನಟ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಕರಗೋಡು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನದು ಸಿನಿಮಾ ಬದುಕು, ಸಿನಿಮಾ ಅಷ್ಟೆ, ಚುನಾವಣಾ ಪ್ರಚಾರಕ್ಕೆ ಕುರಿತಂತೆ ಪದೇ ಪದೇ ಕೇಳಬೇಡಿ. ನಾನಿಲ್ಲಿಗೆ ಭೇಟಿ ನೀಡಿರುವುದು ಚಲನಚಿತ್ರೋತ್ಸವ ಹಿನ್ನಲೆಯಲ್ಲಿ ಮಾತ್ರ. ಚುನಾವಣಾ ಪ್ರವಾರದಲ್ಲಿ ಭಾಗಿಯಾಗಲು ಅಲ್ಲ. ಈ ಹಿಂದೆ ಎಂಎಲ್‌ಎ ಚುನಾವಣೆಯಲ್ಲಿಯೂ ಕರೆದಿದ್ದರು ನಾನು ಹೋಗಿಲ್ಲ. ಈ ಬಾರಿಯೂ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲ್ಲ ಎಂದು ಹೇಳಿದರು.
ಚುನಾವಣೆಗೆ ನಿಂತಿರುವವರೆಲ್ಲರಿಗೂ ಆಲ್ ದಿ ಬೆಸ್ಟ್ ಅಧಿಕಾರಕ್ಕೆ ಬರುವವರು ಉತ್ತಮ ಆಡಳಿತ ನೀಡಿ, ವಿರೋಧ ಪಕ್ಷದವರು ಒಳ್ಳೆಯ ಕೆಲಸ ಮಾಡಿ ಎಂದು ಶುಭ ಕೋರಿದರು.