Mysore
28
clear sky

Social Media

ಶುಕ್ರವಾರ, 17 ಜನವರಿ 2025
Light
Dark

ಡೊಳ್ಳು ಚಿತ್ರ ವೀಕ್ಷಿಸಿದ ಸಿದ್ದರಾಮಯ್ಯ

ಬೆಂಗಳೂರು : ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಒರೈಯನ್ ಮಾಲ್ ನ ಪಿ ವಿ ಆರ್ ಥಿಯೇಟರ್ ನಲ್ಲಿ ಪಡೆದುಕೊಂಡಿರುವ ಡೊಳ್ಳು ಸಿನಿಮಾವನ್ನು ವೀಕ್ಷಿಸಿದರು.

ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿ ಇರಿಸಿಕೊಂಡು ನಿರ್ಮಿಸಿದ ಈ ಸಿನಿಮಾದ ಬಗ್ಗೆ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್, ನಿರ್ಮಾಪಕ ಪವನ್ ಒಡೆಯರ್, ಅಪೇಕ್ಷ ಒಡೆಯರ್ ಅವರನ್ನು ಅಭಿನಂದಿಸಿದರು. ನಾಯಕ ನಟ ಕಾರ್ತಿಕ್ ಮಹೇಶ್, ಚಿತ್ರದ ನಾಯಕಿ ನಿಧಿ ಹೆಗಡೆ ಸೇರಿದಂತೆ ಮಾಜಿ ಸಚಿವ ಜಮೀರ್ ಅಹಮದ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ