ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಬ್ ಶೆಟ್ಟಿ ತಮ್ಮ ಬಹುನಿರೀಕ್ಷಿತ ಕಾಂತರಾ 2 ಗಾಗಿ ಗೆಟಪ್ ಬದಲಿಸಿಕೊಂಡಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ರಿಷಬ್ ತಮ್ಮ ಕುಟುಂಬದೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.
ಈ ಫೋಟೋದಲ್ಲಿ ರಿಶಬ್ ಶೆಟ್ಟಿ ಅವರ ನ್ಯೂ ಲುಕ್ ರಿವಿಲ್ ಆಗಿದೆ. ಕರ್ನಾಟಕ ರಾಜ್ಯದ ಪ್ರಾದೇಶಿಕ ದೈವಾಚರಣೆಯ ಕುರಿತಾದ ಕಾಂತರಾ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗೆದ್ದು ಬೀಗಿತ್ತು. ಈ ಮೂಲಕ ರಿಷಬ್ ಶೆಟ್ಟಿ ಅವರು ಯಶಸ್ಸಿನ ಉತ್ತುಂಗಕ್ಕೇರಿದರು. ಅದಷ್ಟೇ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಶೂಟಿಂಗ್ ಆರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ನಡುವೆ ರಿಷಬ್ ಶೆಟ್ಟಿ ಹಂಚಿಕೊಂಡಿರುವ ಫೋಟೋಗಳಿಂದ ಕಾಂತಾರ 2ನಲ್ಲಿ ರಿಷಬ್ ಶೆಟ್ಟಿ ಹೇಗಿರಲಿದ್ದಾರೆ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಸುಳಿವು ಸಿಕ್ಕಂತಾಗಿದೆ.





