ಪುಣೆ: ಕಿರುತೆರೆ ಮತ್ತು ಬಾಲಿವುಡ್‌ನ ಹಿರಿಯ ನಟ ವಿಕ್ರಂ ಗೋಖಲೆ(೭೫) ಪುಣೆುಯ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬುಧವಾರ ಸಂಜೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮ್ಮ ಸುದೀರ್ಘ ನಟನಾ ವೃತ್ತಿ ಜೀವನದಲ್ಲಿ ಗೋಖಲೆ, ಮರಾಠಿ ಕಿರುತೆರೆ ಮತ್ತು ಹಿಂದಿುಂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ಅಗ್ನಿಪಥ್, ಹಮ್ ದಿಲ್ ದೇ ಚುಕೆ ಸನಮ್ ಮುಂತಾದ ಹಿಟ್ ಚಿತ್ರಗಳಲ್ಲಿ ಗೋಖಲೆ ನಟಿಸಿದ್ದಾರೆ. ಇತ್ತೀಚಿನ, ಮಿಷನ್ ಮಂಗಲ್, ಹಿಚ್ಕಿ, ಬ್ಯಾಂಗ್ ಬ್ಯಾಂಗ್, ದೇ ದನಾ ದನ್ ಇನ್ನು ಚಿತ್ರಗಳಲ್ಲೂ ಅವರು ನಟಿಸಿದ್ದರು.