Mysore
25
broken clouds

Social Media

ಭಾನುವಾರ, 15 ಜೂನ್ 2025
Light
Dark

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಪಾದ ಹಿಡಿದು ಕುಳಿತಿರುವ ಫೋಟೋ ವೈರಲ್ 

ನಿಮಾರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಸಿನಿಮಾಗಿಂತ ವಿವಾದದ ಮೂಲಕನೇ ಅತೀ ಹೆಚ್ಚು ಹೈಲೈಟ್ ಆಗಿದ್ದಾರೆ.

ಸದಾ ನಾಯಕಿಯರ ಮಧ್ಯೆಯೇ ಕಾಣಿಸಿಕೊಳ್ಳುವ ಆರ್‌ಜಿವಿ ಇದೀಗ ನಟಿಯೊಬ್ಬರ ಪಾದ ಹಿಡಿದಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಸಂದರ್ಶನವೊಂದರಲ್ಲಿ ಆರ್‌ಜಿವಿ ಮತ್ತು ಅಶು ರೆಡ್ಡಿ ಭಾಗಿಯಾಗಿದ್ದರು. ಸಂದರ್ಶನದ ಬಳಿಕ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್‌ಜಿವಿ ಕುಳಿತು ಆಕೆಯನ್ನ ಗುರಾಯಿಸುತ್ತಿರುವ ಫೋಟೋವನ್ನ ಆರ್‌ಜಿವಿ ಶೇರ್ ಮಾಡಿದ್ದು, ಫೋಟೋಗೆ ಭಾರಿ ಕಾಮೆಂಟ್ ಹರಿದು ಬರುತ್ತಿದೆ.

ಅಶು ರೆಡ್ಡಿ ಸೋಫಾದ ಮೇಲೆ ಕುಳಿತಿದ್ದಾರೆ. ಅವರ ಹಿಡಿದು ಕುಳಿತಿರುವ ಆರ್‌ಜಿವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದು ಆರ್‌ಜಿವಿ ಫೋಟೋ ಜತೆ ಪೋಸ್ಟ್‌ ಮಾಡಿದ್ದಾರೆ. ಒಟ್ನಲ್ಲಿ ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!