ಚೆನ್ನೈ : ನಟಿ ತ್ರಿಶಾ, ಖುಷ್ಬು ಮತ್ತು ನಟ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಖ್ಯಾತ ಖಳನಟ ಮನ್ಸೂರ್ ಅಲಿ ಖಾನ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ ಎಂದು livelaw.com ವರದಿ ಮಾಡಿದೆ.
ನಟಿ ತ್ರಿಶಾ ಕೃಷ್ಣನ್, ಖುಷ್ಬು ಸುಂದರ್ ಮತ್ತು ನಟ ಚಿರಂಜೀವಿ ಕೊನಿಡೇಲಾ ಅವರು ತಮ್ಮ ವಿರುದ್ಧ ಎಕ್ಸ್ ಪೋಸ್ಟ್‌ನಲ್ಲಿ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ನಟ ಮನ್ಸೂರ್ ಅಲಿ ಖಾನ್ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದಕ್ಕೂ ಮುನ್ನಾ ದಳಪತಿ ವಿಜಯ್ ನಟನೆಯ, ಲೋಕೆಶ್ ಕನಕರಾಜ್ ನಿರ್ದೇಶನದ ʼಲಿಯೋʼ ಸಿನಿಯಾ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಯಶಸ್ಸು ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಹ ನಟಿ ತ್ರಿಶಾ ಕುರಿತು ಮನ್ಸೂರ್ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಈ ಹೇಳಿಕೆಗಳು ಮಹಿಳಾ ದ್ವೇಷ ಹಾಗೂ ಅಗೌರವಯುತವಾದದ್ದು ಎಂದು ಸಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು. ನಟಿ ತ್ರಿಶಾ ಸಾಮಾಜಿಕ ಜಾಲತಾಣದಲ್ಲಿ ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಕ್ಷಮಾಪಣೆಯನ್ನು ಮನ್ಸೂರ್ ಅಲಿ ಖಾನ್ ಕೋರಿದ್ದರು.
ಈ ಬಗ್ಗೆ ಚೆನ್ನೈ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ೩೪೫ಎ ಹಾಗೂ ೫೦೯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಕೋರ್ಟ್ ಮೊರೆ ಹೋಗಿದ್ದ ಮನ್ಸೂರ್‌ಗೆ ಪ್ರಕರಣದ ವಿವರಗಳು ಲಭ್ಯವಿಲ್ಲದೇ ಇರುವುದರಿಂದ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.