Light
Dark

ನಟ ಅಂಬರೀಷ್ ಅವರ 4ನೇ ವರ್ಷದ ಪುಣ್ಯಸ್ಮರಣೆ : ‘ಅಂಬಿ ಅಮರ’ ಎಂದು ಸುಮಲತಾ ಟ್ವೀಟ್

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್‌ ಅವರ 4 ವರ್ಷ  ಕಳೆದಿವೆ. ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ತೆರಳಿ ನೆಚ್ಚಿನ ಅಂಬಿ ಅವರನ್ನು ನೆನಪುಮಾಡಿಕೊಂಡಿದ್ದಾರೆ.

ಮಂಡ್ಯ ಸೇರಿದಂತೆ ಅನೇಕ ಕಡೆ ಅಂಬರೀಷ್‌ ಭಾವಚಿತ್ರಕ್ಕೆ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಇನ್ನು ಅಂಬರೀಷ್ ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಭಾವನಾತ್ಮಕ ಸಂದೇಶ ಹಾಕಿ, ಪತಿಯನ್ನು ಸ್ಮರಿಸಿದ್ದಾರೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ.
‘ಅಂಬಿ ಅಮರ’ ಎಂದು ಟ್ವಿಟ್ ಮಾಡಿದ್ದಾರೆ.

ಅಂಬರೀಶ್‌ ಅವರು 24 ನವೆಂಬರ್ 2018 ರಂದು ಬೆಂಗಳೂರಿನಲ್ಲಿ ಹೃದಯ ಸಮಸ್ಯೆಯಿಂದ ನಿಧನರಾಗಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ