Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಸಹ ಸವಾರನಿಗೆ 12 ಲಕ್ಷ ರೂ. ಮೌಲ್ಯದ ಬೈಕ್ ಗಿಫ್ಟ್ ನೀಡಿದ ನಟ ಅಜಿತ್

ಮುಂಬೈ: ಬೈಕ್ ನಲ್ಲಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ತಮ್ಮ ಸಹ ಸವಾರನಿಗೆ 12 ಲಕ್ಷ ರೂಪಾಯಿ ದುಬಾರಿ ಬಿಎಂಡಬ್ಲ್ಯು ಸೂಪರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಜಿತ್ ತನ್ನ ಸಹ ಸವಾರ ಸುಗತ್ ಸತ್ಪತಿ ಅವರಿಗೆ ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದು, ಇಬ್ಬರೂ 2022 ರಲ್ಲಿ ಸಿಕ್ಕಿಂಗೆ ಬೈಕ್ ಪ್ರವಾಸ ಕೈಗೊಂಡಿದ್ದರು. ನಂತರ ಹಲವು ಬಾರಿ ಜೊತೆಯಾಗಿ ಬೈಕ್ ಪ್ರವಾಸ ಕೈಗೊಂಡಿದ್ದರು. ಸತ್ಪತಿ ಅವರು ಅಜಿತ್ ಅವರಿಗಾಗಿ ಎರಡು ಬಾರಿ ಬೈಕ್ ಪ್ರವಾಸವನ್ನು ಆಯೋಜಿಸಿದ್ದರು.

ಇತ್ತೀಚೆಗಷ್ಟೇ ನೇಪಾಳ ಪ್ರವಾಸ ಆಯೋಜಿಸಿದ್ದ ಸತ್ಪತಿ ಅವರಿಗೆ ನಟ ಅಜಿತ್ ಅವರು ಬಿಎಂಡಬ್ಲ್ಯು ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.

Bikedekho.com ಪ್ರಕಾರ, ಸೂಪರ್ ಬೈಕ್‌ನ ಆನ್ ರೋಡ್ ಬೆಲೆ ರೂ. 12.95 ಲಕ್ಷ. ರೂಪಾಯಿ.

ನಟ ಅಜಿತ್ ಅವರ ಸರ್ಪ್ರೈಸ್ ಗಿಫ್ಟ್ ಗೆ ಪ್ರತಿಕ್ರಿಯಿಸಿರುವ ಸತ್ಪತಿ ಅವರು, “ಯಾವುದೂ ಪೂರ್ವನಿರ್ಧರಿತವಾಗಿರುವುದಿಲ್ಲ. ನಮ್ಮ ಹಿಂದಿನ ಅಡೆತಡೆಗಳು ಹೊಸ ಆರಂಭಕ್ಕೆ ಕಾರಣವಾಬಹುದು” ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಬಿಎಂಡಬ್ಲ್ಯು ಸೂಪರ್ ಬೈಕ್ ಜಗತ್ತನ್ನು ಅನ್ವೇಷಿಸಲು ನನಗೆ ನೆರವಾಗಲಿದೆ. ಇದು ಪ್ರೀತಿಯ ಅಣ್ಣನಿಂದ(ಅಜಿತ್ ಕುಮಾರ್) ಸಿಕ್ಕ ಉಡುಗೊರೆ. ಏನನ್ನೂ ಅಪೇಕ್ಷಿಸದ ಹಾಗೂ ಒಳ್ಳೆದನ್ನೇ ಬಯಸುವ ಗುಣ ಅವರದ್ದು. ಅಂತಹ ದೊಡ್ಡ ಸ್ಟಾರ್ ನಟನೊಂದಿಗೆ ಸಂಪರ್ಕ ಹೊಂದಿರುವುದು ನನ್ನ ಅದೃಷ್ಟ ಎಂದು ಸತ್ಪತಿ ಹೇಳಿದ್ದಾರೆ.

“ಅವರು ನನಗೆ ಹೆಚ್ಚು ಒಳ್ಳೆಯದನ್ನು ಬಯಸುವ ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸದ ಹಿರಿಯ ಸಹೋದರನಂತೆ ಭಾವಿಸಿದರು. ನೀವು ಗ್ರೇಟ್, ಅಣ್ಣಾ” ಎಂದು ಬರೆದುಕೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ