ಭಾರತದ ರೂಪಾಯಿ ಅಮೆರಿಕ ಡಾಲರ್ ವಿರುದ್ಧ ಮೌಲ್ಯ ಕಳೆದುಕೊಳ್ಳುತ್ತಿದ್ದು ಪ್ರತಿ ಡಾಲರ್‌ಗೆ ೮೦ ರೂಪಾಯಿ ಮಟ್ಟಕ್ಕೆ ಕುಸಿಯುವ ಹಂತಕ್ಕೆ ಬಂದಿದೆ. ಜುಲೈ ೧೪ರಂದು ದಿನದ ವಹಿವಾಟಿನಲ್ಲಿ ೦.೨೫ ಪೈಸೆ ಕುಸಿದಿದ್ದು, ೭೯.೮೮ರ ಆಜುಬಾಜಿನಲ್ಲಿ ವಹಿವಾಟಾಗಿದೆ. ಅಮೆರಿಕ ಡಾಲರ್‌ಗೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದೆ.