ಅನಂತನಾಗ್ ಮತ್ತು ದಿಗಂತ್ ‘ಪಂಚರಂಗಿ’ ಚಿತ್ರದಲ್ಲಿ ಜೊತೆyAಗಿ ಕಾಣಿಸಿಕೊಂಡಿದ್ದರು. ಇದೀಗ ಅವರಿಬ್ಬರೂ ಒಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ. ಚಿತ್ರದ ಹೆಸರು ‘ತಿಮ್ಮಯ್ಯ – ತಿಮ್ಮಯ್ಯ’. ಗರುಡ ಮೋಷನ್ ಪಿಕ್ಚರ್ಸ್ ಪ್ರ್ತ್ಯೈ. ಲಿ. ಲಾಂಛನದಲ್ಲಿ ರಾಜೇಶ್ ಶರ್ಮ ನಿರ್ಮಿಸಿರುವ ಈ ಚಿತ್ರವನ್ನು ಸಂಜಯ್ ಶರ್ಮ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಹಿಂದಿ ಚಿತ್ರರಂಗದ ಹೆಸರಾಂತ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದಿರುವ ಸಂಜಯ್ ಶರ್ಮ ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು. ೮೫ರ ವಯಸ್ಸಿನ ತಾತನ ಪಾತ್ರ ಹಿರಿಯ ತಿಮ್ಮಯ್ಯನಾಗಿ ಅನಂತನಾಗ್ ನಟಿಸಿದರೆ, ಅವರ ಮೊಮ್ಮಗ ಕಿರಿಯ ತಿಮ್ಮಯ್ಯನ ಪಾತ್ರದಲ್ಲಿ ದಿಗಂತ್ ಅವರಿದ್ದಾರೆ. ಅವರೊಂದಿಗೆ ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುವಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ಇದ್ದಾರೆ.
ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಜಯಂತ್ ಕಾಯ್ಕಿಣಿ ಗೀತರಚನೆ, ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕೊಡಗು ಹಾಗೂ ಕುಣಿಗಲ್‌ನಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ.