Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ಆಪ್ತರ ಸಮ್ಮುಖದಲ್ಲಿ ಅಭಿಷೇಕ್ ಅಂಬರೀಷ್-ಅವಿವಾ ನಿಶ್ಚಿತಾರ್ಥ

ಮೈಸೂರು: ಮದುವೆ ಸದ್ಯಕ್ಕಿಲ್ಲ ಎನ್ನುತ್ತಿದ್ದ ನಟ ಅಭಿಷೇಕ್ ಅಂಬರೀಷ್ ತಮ್ಮ ಬಾಲ್ಯದ ಗೆಳತಿ, ಮಾಡೆಲ್ ಅವಿವಾ ಬಿದ್ದಪ್ಪ ಅವರ ಜತೆ ಇಂದು (ಡಿ.11) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.


ಎರಡೂ ಕುಟುಂಬದ ಸದಸ್ಯರು ಹಾಗೂ ಕೆಲವೇ ಮಂದಿ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಅಂಬರೀಷ್ ಹಾಗೂ ಸುಮಲತಾ ಪುತ್ರನ ನಿಶ್ಚಿತಾರ್ಥದ ಕುರಿತು ಹಲವು ದಿನಗಳಿಂದ ಸುದ್ದಿ ಕೇಳಿಬರುತ್ತಿತ್ತು. ಆದರೆ ಕುಟುಂಬ ವರ್ಗದವರು ಈ ಮಾಹಿತಿಯನ್ನು ನಿರಾಕರಿಸಿದ್ದರು.

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಕೆಲ ವರ್ಷಗಳಿಂದ ಪರಿಚಯ ಬೆಳೆದಿತ್ತು.


ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಉಂಗುರ ಬದಲಾಯಿಸಿಕೊಂಡಿದ್ದಾರೆ. ಸಿನಿಮಾ, ರಾಜಕೀಯ ಕ್ಷೇತ್ರದ ಕೆಲವೇ ಕೆಲವು ಗಣ್ಯರು ಈ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ.
ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ. 2019ರಲ್ಲಿ ತೆರೆಕಂಡ ‘ಅಮರ್’ ಸಿನಿಮಾ ಮೂಲಕ ಅಭಿಷೇಕ್ ಅಂಬರೀಷ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಸೂರಿ ನಿರ್ದೇಶನ ಮಾಡುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಹಾಗೂ ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!