ಮಳೆಗಾಲದಲ್ಲಿ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಮದ್ದು ಮಾಡಿಕೊಳ್ಳಬಹುದು. ಅವುಗಳೆಂದರೆ
* ಮಳೆಯಲ್ಲಿ ನೆನೆದು ಸಣ್ಣ ಪ್ರಮಾಣದ ನೆಗಡಿ ಆದರೆ ಒಂದು ಲವಂಗ ಸೇವಿಸಿ. ಇದರಿಂದ ದೇಹದಲ್ಲಿ ಉಷ್ಣಾಂಶ ಮಟ್ಟ ತುಸು ಹೆಚ್ಚುತ್ತದೆ.
* ಬಿಸಿ ಹಾಲು ಅಥವಾ ಬಿಸಿ ನೀರಿಗೆ ಅರಿಶಿನ ಪುಡಿ, ಸ್ವಲ್ಪ ಬೆಲ್ಲ ಬೆರೆಸಿ, ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
* ಮಳೆಗಾಲದಲ್ಲಿ ದೇಹದ ಉಷ್ಣಾಂಶ ಕಡಿಮೆ ಇರುತ್ತದೆ. ಇದರಿಂದ ಬಿಸಿ ನೀರನ್ನು ಕುಡಿಯುವುದು ಉತ್ತಮ. ನೀರು ಕಾಯಿಸುವಾಗ ತುಳಸಿ ಅಥವಾ ಒಂದು ತುಂಡು ಶುಂಠಿ ಹಾಕಿದರೆ ಉತ್ತಮ.
* ಚಳಿಗೆ ಮಂಡಿ, ಸಂದುಗಳ ನೋವು ಸಹಜ. ಇದಕ್ಕೆ ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿಕೊಂಡು ನೀರಿನಲ್ಲಿ ಹಾಕಿ ಕುಡಿಯಬಹುದು.
* ದಾಳಿಂಬೆ, ಒಣಗಿದ ನೆಲ್ಲಿಕಾಯಿ, ನೆಲ್ಲಿಕಾಯಿ ಉಪ್ಪಿನಕಾಯಿಗಳನ್ನು ಈ ವೇಳೆಯಲ್ಲಿ ಸೇವನೆ ಮಾಡುವುದು ಉತ್ತಮ