Mysore
26
overcast clouds

Social Media

ಮಂಗಳವಾರ, 03 ನವೆಂಬರ್ 2026
Light
Dark

ಯುವನಿಧಿ: ನಿರುದ್ಯೋಗಿಗಳ ಖಾತೆಗೆ 47 ಕೋಟಿ ರೂ

ಕೇಶವ್ ಎಂ.

ಮೈಸೂರು ಜಿಲ್ಲೆಯಲ್ಲಿ ಪದವಿ ೧೯,೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ

ಮೈಸೂರು: ಪದವಿ ಹಾಗೂ ಡಿಪ್ಲೊಮಾ ಪಡೆದು ಉದ್ಯೋಗ ದೊರೆಯದೆ ನಿರುದ್ಯೋಗಿಗಳಾಗಿರುವ ಯುವಜನರಿಗೆ ದೈನಂದಿನ ಜೀವನೋಪಾಯಕ್ಕೆ ನೆರವಾಗಲಿ ಎಂಬ ಸದುದ್ದೇಶದಿಂದ ರಾಜ್ಯಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಪಡೆಯುವಲ್ಲಿ ಜಿಲ್ಲೆಯ ಹೆಣ್ಣು ಮಕ್ಕಳೇ ಮುಂದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಸಂದರ್ಶನ, ಪ್ರಯಾಣ ವೆಚ್ಚ, ಉದ್ಯೋಗ ಹುಡುಕಾಟಕ್ಕೆ ಸಂಬಂಧಿಸಿದ ಇತರ ವೆಚ್ಚಗಳನ್ನು ನಿಭಾಯಿಸಲು, ಕೌಶಲ ತರಬೇತಿ ಪಡೆದು ಕೊಳ್ಳಲು,ಮ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಸರ್ಕಾರ ಯುವನಿಧಿ ಯೋಜನೆ ಜಾರಿ ಮಾಡಿ, ಪ್ರತಿ ತಿಂಗಳು ಅರ್ಹ ಪದವೀಧರರಿಗೆ ೩,೦೦೦ ರೂ., ಡಿಪ್ಲೋಮಾ ಪಡೆದವರಿಗೆ ೧,೫೦೦ ರೂ. ನೀಡುತ್ತಿದೆ. ಪದವಿ, ಡಿಪ್ಲೊಮಾ ಪಡೆದು ಯುವ ನಿಧಿಗೆ ಪದವಿ ೧೯೨೭೯, ಡಿಪ್ಲೊಮಾ ೨೬೮ ಮಂದಿ ಸೇರಿದಂತೆ ಒಟ್ಟು ೧೯,೫೪೭ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿರುವ ಯುವ ಜನರ ಖಾತೆಗಳಿಗೆ ಕಳೆದ ಮೂರು ವರ್ಷಗಳಲ್ಲಿ ೪೭.೭೨ ಕೋಟಿ ರೂ. ಜಮೆ ಮಾಡಲಾಗಿದ್ದು, ಯೋಜನೆಯ ಸೌಲಭ್ಯ ಪಡೆಯುವಲ್ಲಿ ನಂಜನ ಗೂಡು ತಾಲ್ಲೂಕು ಮೊದಲ ಸ್ಥಾನದಲ್ಲಿದ್ದರೆ, ಸರಗೂರು ತಾಲ್ಲೂಕು ಕೊನೆಯ ಸ್ಥಾನದಲ್ಲಿದೆ.

” ಡಿಸೆಂಬರ್ ೨೦೨೩ರಿಂದ ೨೦೨೬ರ ಸೆಪ್ಟೆಂಬರ್ ೩೦ರವರೆಗೆ ೮೮೭೭ ಪುರುಷರು ಹಾಗೂ ೧೦೬೭೦ ಮಹಿಳೆಯರು ಸೇರಿದಂತೆ (ಪದವಿ ೧೯೨೭೯, ಡಿಪ್ಲೊಮಾ ೨೬೮) ೧೯,೫೪೭ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.”

” ಯುವನಿಧಿ ೨ ವರ್ಷಗಳ ಕಾಲ ಪಡೆದವರು ೫೩೨೨, ಐಟಿ, ಜಿಎಸ್‌ಟಿ ಪಾವತಿಸಿದ ಪರಿಣಾಮ ೧೩ ಮಂದಿಗೆ, ಉನ್ನತ ಶಿಕ್ಷಣ ಮುಂದುವರಿಸಿದ ೧೯೩೬ ಮಂದಿಗೆ ಯುವನಿಧಿ ಸ್ಥಗಿತಗೊಳಿಸಲಾಗಿದೆ. ಪದವಿ ಹಾಗೂ ಡಿಪ್ಲೊಮಾ ಪಡೆದು ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ೭೮೫ ಮಂದಿಯನ್ನು ಈ ಯೋಜನೆಯಿಂದ ಕೈಬಿಡಲಾಗಿದೆ”

” ಯುವನಿಧಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಪಾಸಾದವರು ತಮ್ಮ ಗಮನಕ್ಕೆ ಬಂದಿಲ್ಲ, ಫಲಾನುಭವಿಗಳು ಇದರ ಲಾಭ ಪಡೆದು, ಸದುಪಯೋಗ ಪಡೆದುಕೊಂಡಿದ್ದರ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಗೊತ್ತಾಗಲಿದೆ.”

-ಮಂಜುನಾಥ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

 

 

Tags:
error: Content is protected !!