Mysore
31
overcast clouds

Social Media

ಬುಧವಾರ, 14 ಅಕ್ಟೋಬರ್ 2026
Light
Dark

ರೇಣುಕಾಸ್ವಾಮಿ ಕೊಲೆಯಾದ ದಿನ ನಡೆದಿದ್ದೇನು?

ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ;

ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು 
ಮಾಫಿ ಸಾಕ್ಷಿಯಾದ 14ನೇ ಆರೋಪಿ: ಪ್ರದೋಷ ಹೇಳಿಕೆಯಲ್ಲಿ ಭಯಾನಕ ಮಾಹಿತಿ

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ ಸುಬ್ಬರಾವ್ (44 ವರ್ಷ) ಮಾಫಿ ಸಾಕ್ಷಿಯಾಗಿ ಬೆಂಗಳೂರಿನ 58ನೇ ಅಪರ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆಯಲ್ಲಿ ನೀಡಿದ ಹೇಳಿಕೆ ಪೂರ್ಣಪಾಠ ಇಲ್ಲಿದೆ.

ಬೆಂಗಳೂರಿನ ಗಿರಿನಗರದ ನಿವಾಸಿಯಾದ ನಾನು ಮೊದಲು ಐಟಿ ಕಂಪನಿಯಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದೆ. ನಾನು ಸ್ವಾಮಿ ವಿವೇಕಾನಂದ ಯುನಿವರ್ಸಿಟಿಯಲ್ಲಿ ಫೈನಾನ್ಸ್ ವಿಷಯದಲ್ಲಿ ಎಂಬಿಎ ಓದಿದ್ದೇನೆ. ಈ ಮೊದಲು Oracle India Pvt. Ltd.
ಕಂಪೆನಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನಾನು 2003-2004ರಲ್ಲಿ ಜಯನಗರದ ನ್ಯಾಷನಲ್ಕಾ ಲೇಜ್ ಮೈದಾನಕ್ಕೆ ಕ್ರಿಕೆಟ್ ಆಡಲು ಹೋಗುತ್ತಿದ್ದೆ. ಅಲ್ಲಿನನಗೆ ದರ್ಶನ್‌ರವರ ಪರಿಚಯವಾಗಿತ್ತು. ಕಾಲಕ್ರಮೇಣ ನಾವು ಒಳ್ಳೆಯ ಸ್ನೇಹಿತರಾಗಿದ್ದೆವು.

ನಾನು ಕಾರ್ಪೋರೆಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತಿತ್ತು. ಆ ಸಮಯದಲ್ಲಿ ನಾನು ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಅವರ ಮನೆಯಲ್ಲಿ ಕಾರ್ಯಕ್ರಮ ಗಳಿದ್ದರೆ ಹಾಜರಾಗುತ್ತಿದ್ದೆ, ಅವರೊಂದಿಗೆ ಹೊರಗಡೆ ಹೋಗುವುದಿದ್ದರೆ ಹೋಗುತ್ತಿದ್ದೆ.

08.06.2024ರಂದು ಶನಿವಾರ ನನಗೆ ಬಿಡುವು ಇದ್ದ ಕಾರಣ ಬೆಳಿಗ್ಗೆ 10.30ರ ಸುಮಾರಿಗೆ ಗಿರಿನಗರದ ನಮ್ಮ ಮನೆಯಿಂದ ಬೈಕ್‌ನಲ್ಲಿ ದರ್ಶನ್ ಅವರ ಮನೆಗೆ ಹೋಗಿದ್ದೆ. ಆಗ ದರ್ಶನ್ ತಮ್ಮ ಮನೆಯ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಕೋಚ್ ಹೇಮಂತ್ ಕೂಡ ಇದ್ದರು. ನಾನು ಸುಮಾರು 20 ನಿಮಿಷಗಳ ಕಾಲ ದರ್ಶನ್ ಅವರೊಂದಿಗೆ ಕಾಲ ಕಳೆದು ನಂತರ ನನ್ನ ಮಗಳನ್ನು ಸ್ವಿಮ್ಮಿಂಗ್‌ಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿ ಮನೆಗೆ ಹೊರಡಲು ಸಿದ್ಧನಾದೆ.

• ಪಬ್‌ನಲ್ಲಿ ಪಾರ್ಟಿ ಅರೇಂಜ್‌ಮೆಂಟ್:
ಆಗ ದರ್ಶನ್ ‘ನಿಮಗೆ ಈ ದಿನ ಬೇರೆ ಯಾವ ಕೆಲಸ ಇದೆ’ ಎಂದು ಕೇಳಿದರು. ಆಗ ನಾನು ಬೇರೆ ಯಾವುದೇ ಕೆಲಸವಿಲ್ಲ. ಸುಸ್ತಾಗಿದೆ ರೆಸ್ಟ್ ಮಾಡಬೇಕು ಎಂದು ತಿಳಿಸಿದೆ. ಆಗ ದರ್ಶನ್ ‘ಮಧ್ಯಾಹ್ನ ವಿನಯ್ (10ನೇ ಆರೋಪಿ) ಅವರ ಪಬ್ ಅಂಡ್ ರೆಸೋರೆಂಟ್ (ವಿಷ್ಣುವರ್ಧನ್ ಸಮಾಧಿ ರಸ್ತೆಯಲ್ಲಿರುವ Stoney Brook) ನಲ್ಲಿ ಒಂದು ಪಾರ್ಟಿ ಇದೆ ಬನ್ನಿ’ ಎಂದು ತಿಳಿಸಿದರು. ಹೋಟೆಲ್ವ್ಯಾ ಪಾರ ಮಾಡುವ ವಿನಯ್ ನನಗೆ 3-4 ವರ್ಷಗಳಿಂದ ಪರಿಚಯ. ಅವರ ಮನೆ ಆರ್.ಆರ್.ನಗರದಲ್ಲಿದೆ ಎಂದು ತಿಳಿದಿದೆ. ಆದರೆ ಅವರ ಮನೆಯನ್ನು ನಾನು ನೋಡಿಲ್ಲ.

ಸ್ಕಾರ್ಪಿಯೋದಲ್ಲಿ ದರ್ಶನ್ ಕರೆದುಕೊಂಡು ಪಬ್‌ಗೆ ಪಯಣ: 
ನನಗೆ ತುಂಬಾ ಸುಸ್ತಾಗಿದೆ. ರೆಸ್ಟ್ ಮಾಡಬೇಕು. ಹಾಗಾಗಿ ಪಾರ್ಟಿಗೆ ಬರಲು ಆಗುವುದಿಲ್ಲ ಎಂದು ದರ್ಶನ್‌ಗೆ ತಿಳಿಸಿದೆ. ಆದರೆ ದರ್ಶನ್ ಅವರು “ನೀನು ಬರಲೇಬೇಕು, ಅಲ್ಲಿಗೆ ಯಶಸ್ ಸೂರ್ಯ, ಚಿಕ್ಕಣ್ಣ ಬರುತ್ತಾರೆ. ಬೇಗ ವಾಪಸ್ಸು ಬರೋಣ’ ಎಂದು ಒತ್ತಾಯ ಮಾಡಿದರು. ಆಗ ನಾನು ಇವತ್ತು ಒಂದು ದಿನ ಬಿಟ್ಟು ಬಿಡಿ ನನಗೆ ಕೆಲಸ ಇದೆ ಎಂದು ದರ್ಶನ್‌ಗೆ ಹೇಳಿದಾಗ, ಅವರು ತಮ್ಮ ಮನೆಯಲ್ಲಿ ನಾಳೆ ಕಾರ್ಯಕ್ರಮ ಇದೆ, ಬೇಗ ವಾಪಸ್ಸು ಬಂದು ಬಿಡೋಣ ಎಂದು ಹೇಳಿದರು. ಅವರ ಒತ್ತಾಯಕ್ಕೆ ಮಣಿದು ನಮ್ಮ ಮನೆಗೆ ವಾಪಸ್ಸು ಬಂದು ಡ್ರೆಸ್ ಚೇಂಜ್ ಮಾಡಿ, ಬ್ಲಾಕ್ ಟೀಶರ್ಟ್ ಮತ್ತು ಬ್ಲೂ ಜೀನ್ಸ್ ಹಾಕಿಕೊಂಡು ನನ್ನ ಕಪ್ಪು ಬಣ್ಣದ ಸ್ಕಾರ್ಪಿಯೋ (KA01- MG-7375) ದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ದರ್ಶನ್ ಮನೆಗೆ ಹೋದೆ. ಆಗ ದರ್ಶನ್ ರೆಡಿಯಾಗುತ್ತಿದ್ದರು. ಆ ಸಮಯದಲ್ಲಿ ಅವರ ಮನೆಗೆ ಇನ್ನು ಇಬ್ಬರು ಅತಿಥಿಗಳು ಬಂದಿದ್ದರು, ಅವರು ಯಾರು ಎಂದು ನನಗೆ ಗೊತ್ತಿಲ್ಲ. ರೆಡಿ ಆಗುತ್ತಿದ್ದ ದರ್ಶನ್‌ಗೆ ನನ್ನ ಕಾರಿನಲ್ಲಿ ಹೋಗುವುದೇ ಅಥವಾ ನಿಮ್ಮ ಕಾರಿನಲ್ಲಿ ಹೋಗುವುದೆ ಎಂದು ಕೇಳಿದೆ. ಆಗ ದರ್ಶನ್ ನಿಮ್ಮ ಕಾರನ್ನು ತೆಗೆದುಕೊಂಡು ಹೋಗೋಣ, ಕಾರು ರೆಡಿ ಮಾಡಿಕೊಳ್ಳಿ ಎಂದರು.

ಮೈಸೂರಿನ ದರ್ಶನ್ ಫಾರಂಹೌಸ್ ನೋಡಿಕೊಳ್ಳುವ ವ್ಯಕ್ತಿ ಭೇಟಿ: 
ಮನೆಯಿಂದ ಹೊರಗೆ ಬರುವಾಗ ನಾಗರಾಜ್ (11ನೇ ಆರೋಪಿ) ಎದುರಾದರು. (ಇವರು ದರ್ಶನ್ ಸ್ನೇಹಿತರಾಗಿದ್ದು, ದರ್ಶನ್ ಅವರ ಮೈಸೂರಿನ ಫಾರಂ ಹೌಸ್ ನೋಡಿಕೊಳ್ಳುತ್ತಿದ್ದರು. ಇವರು ನನಗೆ ಸುಮಾರು 18 ವರ್ಷಗಳಿಂದ ಪರಿಚಯ) ಆಗ ನಾನು ಪಾರ್ಟಿಗಾಗಿ ಮೈಸೂರಿನಿಂದ ಬಂದಿದ್ದೀರಾ ಎಂದು ನಾಗರಾಜುವನ್ನು ಚುಡಾಯಿಸಿದೆ. ಅದಕ್ಕೆ ನಾಗರಾಜ್ ‘ಇಲ್ಲ ನನಗೆ ಇಂದು ತುಂಬಾ ಹುಷಾರಿಲ್ಲ. ಆದರೆ ದರ್ಶನ್ ಹಿಂದಿನ ದಿನ ರಾತ್ರಿ ಕರೆ ಮಾಡಿ ತೋಟದಲ್ಲಿ ಕೆಲಸ ಮಾಡುವವರ ಸಂಬಳ ಕೊಡುತ್ತೇನೆ. ಬಂದು ತೆಗೆದುಕೊಂಡು ಹೋಗು ಎಂದು ತಿಳಿಸಿದ್ದರಿಂದ ಬಂದಿದ್ದೇನೆ’ ಎಂದರು. ಆಗ ನಾನು ಮುಂದಿನ ವಾರ ಬಂದು ಹಣ ತೆಗೆದುಕೊಂಡು ಹೋಗಬಹುದಿತ್ತು ಎಂದೆ. ಅದಕ್ಕೆ ನಾಗರಾಜ್ ‘ದರ್ಶನ್ ಅವರು ಬರಬೇಕು ಎಂದು ಒತ್ತಾಯ ಮಾಡಿದ್ದರಿಂದ ಬಂದಿದ್ದೇನೆ’ ಎಂದರು. ಅಷ್ಟರಲ್ಲಿ ದರ್ಶನ್ ಮನೆಯಿಂದಹೊರಗೆಬಂದವರೇ’ ಅಭಿಮಾನಿಗಳನ್ನು ಮಾತನಾಡಿಸಿಕೊಂಡು ಬರುತ್ತೇನೆ, ನೀವು ಕಾರಿನಲ್ಲಿ ಕುಳಿತುಕೊಳ್ಳಿ’ ಎಂದರು.

ವೆಂಕಟೇಶ್ವರ ದೇವರ ದರ್ಶನ:  ನಂತರ ನಾನು ನನ್ನ ಕಾರನ್ನು ತೆಗೆದು ಕೊಂಡು ಬಂದು ಅವರ ಮನೆಯ ಮುಂದೆ ನಿಲ್ಲಿಸಿದೆ. ನನ್ನ ಪಕ್ಕದ ಸೀಟಿನಲ್ಲಿ ದರ್ಶನ್ ಕುಳಿತರು. ನನ್ನ ಹಿಂಬದಿ ಸೀಟ್‌ನಲ್ಲಿ ನಾಗರಾಜ್ ಕುಳಿತರು. ಅಲ್ಲಿಂದ ನಾವು ನೇರವಾಗಿ ಆರ್.ಆರ್ ನಗರದ ಬಿಬಿಎಂಪಿ ಕಚೇರಿಯ ಹಿಂಭಾಗದ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಹೋದೆವು. ಕಾರಿನಲ್ಲಿಯೇ ಕುಳಿತು ದೇವರ ದರ್ಶನ ಮಾಡಿದೆವು. ನಂತರ ಅಲ್ಲಿಂದ ವಿನಯ್ ಅವರ ಪಬ್ ಅಂಡ್ ರೆಸ್ಟೋರೆಂಟ್ ಕಡೆಗೆ ಪ್ರಯಾಣ ಬೆಳೆಸಿದೆವು.

ದರ್ಶನ್ ಕುಳಿತಿದ್ದ ಕಾರನ್ನು ಫಾಲೋ ಮಾಡುತ್ತಿದ್ದವು ಮತ್ತೆರಡು ಕಾರು: ಈ ವೇಳೆ ಬಿಳಿ ಬಣ್ಣದ ಸ್ಥಾರ್ಪಿಯೋ (KA03-MU-8821) ಅಫ್ ಕಾರು ನಮ್ಮ ಕಾರನ್ನು ಫಾಲೋ ಮಾಡುತ್ತಿತ್ತು. ಅದರಲ್ಲಿ ನಾಗರಾಜ್ ಅವರ ಸ್ನೇಹಿತರು ಇದ್ದರು. ಅದರ ಹಿಂದೆ ಬಿಳಿ ಬಣ್ಣದ ಮತ್ತೊಂದು ಫೋರ್ಡ್ ಎಂಡೆವರ್ ಕಾರು ಫಾಲೋ ಮಾಡಿಕೊಂಡು ಬರುತ್ತಿತ್ತು. ಅದರಲ್ಲಿ ದರ್ಶನ್ ಅವರ ಇಬ್ಬರು ಬಾಡಿಗಾರ್ಡ್‌ಗಳು ಇದ್ದರು. ಮಧ್ಯಾಹ್ನ 1.30ರ ಸುಮಾರಿಗೆ ರೆಸ್ಟೋರೆಂಟ್ ತಲುಪಿದೆವು. ರೆಸ್ಟೋರೆಂಟ್ ಹೊರಗಡೆ ಯಶಸ್ ಸೂರ್ಯ, ವಿನಯ್‌ ಇದ್ದರು. ನಾನು ರೆಸ್ಟೋರೆಂಟ್ ಮುಂಭಾಗ ನನ್ನ ಕಾರು ನಿಲುಗಡೆ ಮಾಡಿದಾಗ ದರ್ಶನ್ ಮತ್ತು ನಾಗರಾಜ್ ವಾಹನದಿಂದ ಇಳಿದು ರೆಸ್ಟೋರೆಂಟ್ ಒಳಗಡೆ ಹೋದರು. ಬಿಳಿ ಬಣ್ಣದಸ್ಥಾರ್ಪಿಯೋದಲ್ಲಿ ಬಂದವರೂತಮ್ಮ ವಾಹನದಿಂದ ಇಳಿದು ರೆಸ್ಟೋರೆಂಟ್ ಒಳಗಡೆ ಹೋದರು.

ದರ್ಶನ್‌ಗೋಸ್ಕರವೇ ಮೀಸಲಾಗಿತ್ತು “D-BOSS Safari’ ಜಾಗ:  ನಾನು ಕಾರನ್ನು ನಿಲುಗಡೆ ಮಾಡಿ ರೆಸ್ಟೋರೆಂಟ್ ಒಳಗಡೆ ಹೋದಾಗ, ವಿನಯ್ ಅವರು ಮೊದಲನೆ ಮಹಡಿಯಲ್ಲಿ ‘D-BOSS Safari ಎಂಬ ಜಾಗವನ್ನು ದರ್ಶನ್ ಅವರಿಗೋಸ್ಕರವೇ ಮೀಸಲಿ ಟ್ಟಿದ್ದರು. ಆ ಜಾಗದಲ್ಲಿ ದರ್ಶನ್ ಸೆರೆ ಹಿಡಿದಿದ್ದ ‘ವೈಲ್ಡ್ ಲೈಫ್ ಫೋಟೋಗ್ರಫಿ’ ಯನ್ನು ಅಂಟಿಸಿದ್ದರಿಂದ, ಆ ಜಾಗಕ್ಕೆ ‘D-BOSS Safari’ ಎಂದು ಹೆಸರಿಟ್ಟಿದ್ದರು. ನಾನು ಮೊದಲನೇ ಮಹಡಿಗೆ ಹೋಗುವಷ್ಟರಲ್ಲಿ, ಅಲ್ಲಿ ಇದ್ದವರಿಗೆಲ್ಲಾ ಮದ್ಯ ನೀಡಲಾಗಿತ್ತು. ಅಲ್ಲಿ ದರ್ಶನ್, ಯಶಸ್ ಸೂರ್ಯ, ನಾಗರಾಜ್, ವಿನಯ್ ಇದ್ದರು. 10-15 ನಿಮಿಷಗಳ ನಂತರ ಚಿಕ್ಕಣ್ಣ ಅಲ್ಲಿಗೆ ಬಂದರು. ನಾನು ಮಹಡಿಯನ್ನು ಹತ್ತುವಾಗ ಬಿಳಿ ಸ್ಥಾರ್ಪಿಯೋದಲ್ಲಿ ಬಂದಿದ್ದ ನಾಗರಾಜ್ ಅವರ ಸ್ನೇಹಿತ ದರ್ಶನ್ ಅವರನ್ನು ಭೇಟಿ ಮಾಡಿ ವಾಪಸ್ಸು ಹೋಗುತ್ತಿದ್ದರು. ನಾನು ದರ್ಶನ್ ಇದ್ದಲ್ಲಿಗೆ ಹೋಗಿ ಒಂದು ಚೇರ್ ಮೇಲೆ ಕುಳಿತೆ. ನನ್ನ ಪಕ್ಕದ ಚೇರ್ ಖಾಲಿ ಇತ್ತು. ಅದರ ಪಕ್ಕದ ಚೇರಲ್ಲಿ ನಾಗರಾಜ್, ಅವರ ಎದುರು ವಿನಯ್, ಅವರ ಪಕ್ಷದಲ್ಲಿ ದರ್ಶನ್, ಅವರ ಪಕ್ಕದಲ್ಲಿ ಚಿಕ್ಕಣ್ಣ ಕುಳಿತಿದ್ದರು. ನಾನು ಮದ್ಯಪಾನ ಮಾಡದೇ ಜ್ಯೂಸ್ ಬೇಕು ಎಂದು ಕೇಳಿದೆ. ಅದರಂತೆ ನನಗೆ ಜ್ಯೂಸ್ ಸರ್ವ್ ಮಾಡಿದರು. ಈ ವೇಳೆ ನಾವು ಚಿಕ್ಕಣ್ಣ ಅವರ ಮುಂದಿನ ಚಿತ್ರದ ಬಗ್ಗೆ ಮಾತುಕತೆ ನಡೆಸುತ್ತಿದ್ದೆವು.

ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಎಂಟ್ರಿ: 
ಮಧ್ಯಾಹ್ನ 3 ಗಂಟೆ ಸುಮಾರಿಗೆ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ (3ನೇ ಆರೋಪಿ) ಅಲ್ಲಿಗೆ ಬಂದರು. (ಇವರು ನನಗೆ ಸುಮಾರು 7 ವರ್ಷಗಳಿಂದ ಪರಿಚಯ) ಪವನ್ ನೇರವಾಗಿ ನನ್ನ ಹಿಂದಿನಿಂದ ಬಂದು ದರ್ಶನ್ ಮತ್ತು ವಿನಯ್ ಮಧ್ಯ ಹೋಗಿ ನಿಂತುಕೊಂಡು ತಮ್ಮ ಜೇಬಿನಿಂದ ಮೊಬೈಲ್ ತೆಗೆದು ಅದರಲ್ಲಿ ಇದ್ದ ಫೋಟೋಗಳನ್ನು ದರ್ಶನ್ ಅವರಿಗೆ ತೋರಿಸಿ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ನಂತರ ದರ್ಶನ್ ಮತ್ತು ವಿನಯ್ ಏನೋ ಮಾತನಾಡಿಕೊಂಡರು. ಆಗ ನನ್ನ ಪಕ್ಕ ಪಕ್ಕದಲ್ಲಿ ಕುಳಿತಿದ್ದ ನಾಗರಾಜ್ ಏನು ಎಂದು ನನಗೆ ಕೈಸನ್ನೆ ಮಾಡಿ ಕೇಳಿದರು. ನಾನು ನನಗೂ ಗೊತ್ತಿಲ್ಲ ಎಂಬಂತೆ ಕೈಸನ್ನೆಯಲ್ಲೇ ತಿಳಿಸಿದೆ.

ಪವಿತ್ರಾ ಗೌಡಗೆ ವಾಟ್ಸ್ ಆ್ಯಪ್ ಕಾಲ್:  ನಂತರ ದರ್ಶನ್ ಅವರು ಪವಿತ್ರಾ ಗೌಡ(1ನೇ ಆರೋಪಿ) ಗೆ ಫೋನ್ ಮಾಡಿ ಕೊಡು ಎಂದು ಪವನ್‌ಗೆ ತಿಳಿಸಿದರು. ಅದರಂತೆ ಪವನ್ ತನ ಫೋನ್‌ನಿಂದ ಪವಿತ್ರಾ ಗೌಡ ಅವರಿಗೆ ವಾಟ್ಸ್‌ ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿದ. ಪವಿತ್ರಾ ಗೌಡ ಕರೆ ಸ್ವೀಕರಿಸಿದಾಗ, ದರ್ಶನ್ ಅವರು ನೀನು ಅಳಬೇಡ, ತಲೆಕೆಡಿಸಿಕೊಳ್ಳಬೇಡ; ನಾನಿದ್ದೇನೆ. ರೆಸ್ಟೋರೆಂಟ್‌ನಿಂದ ಊಟ ಕಳುಹಿಸಿಕೊಡುತ್ತೇನೆ. ಊಟ ಮಾಡಿ ಮನೆಯಲ್ಲಿ ಇರು, ಏನು ಮಾಡಬೇಕು ಎಂದು ನನಗೆ ಗೊತ್ತು. ನಾನು ಮನೆಗೆ ಬರುತ್ತೇನೆ ಎಂದು ತಿಳಿಸಿದರು. (ಪವಿತ್ರಾ ಗೌಡ ನನಗೆ ಸುಮಾರು 7-8 ವರ್ಷಗಳಿಂದ ಗೊತ್ತು)

ಪಬ್‌ನಿಂದ ಹೊರಟು ನಿಂತಾಗ: ಇದಾದ ಅರ್ಧ ಮುಕ್ಕಾಲು ಗಂಟೆ ಕಾಲ ನಾವೆಲ್ಲರೂ ರೆಸ್ಟೋರೆಂಟ್‌ನಲ್ಲಿ ಇದ್ದು, ಊಟ ಮುಗಿಸಿ ಹೊರಡೋಣ ಎಂದು ಎಲ್ಲರೂ ಎದ್ದಾಗ, ದರ್ಶನ್ ಅವರು ನಮಗೆಲ್ಲಾ ನೀವು ಹೊರಡಿ, ವಿನಯ್‌ ಮತ್ತು ನನಗೆ ಸ್ವಲ್ಪ ಕೆಲಸ ಇದೆ ಮುಗಿಸಿಕೊಂಡು ಹೋಗುತ್ತೇವೆ’ ಎಂದರು. ಆಗ ನಾನು ದರ್ಶನ್ ಅವರಿಗೆ ನಿಮ್ಮ ಮನೆಗೆ ಡ್ರಾಪ್ ಮಾಡಬೇಕಾ ಎಂದು ಕೇಳಿದಾಗ, ಅವರು ‘ಇಲ್ಲ ನೀವೂ ಹೊರಡಿ ನಾನು ವಿನಯ್ ಅವರೊಂದಿಗೆ ಹೊರಡುತ್ತೇನೆ’ ಎಂದು ತಿಳಿಸಿದರು. ಅದರಂತೆ ನಾನು ಹೊರಡಲು ತಯಾರಾದಾಗ, ದರ್ಶನ್ ಮತ್ತೆ ನನಗೆ ‘ಇಲ್ಲ ಇರಿ, ನಾನು ನಿಮ್ಮ ಕಾರಿನಲ್ಲಿ ಬರುತ್ತೇನೆ’ ಎಂದು ತಿಳಿಸಿದರು. ಅದರಂತೆ ನಾನು ದಡಬಡ ರೆಸ್ಟೋರೆಂಟ್‌ನ ಹೊರಗೆ ಬಂದು ನನ್ನ ಕಾರನ್ನು ತಂದು ರೆಸ್ಟೋರೆಂಟ್ ಮುಂಭಾಗ ನಿಲ್ಲಿಸಿದೆ. ದರ್ಶನ್ ಬಂದು ನನ್ನ ಪಕ್ಕದ ಸೀಟ್‌ನಲ್ಲಿ ಕುಳಿತರು. ನನ್ನ ಹಿಂಭಾಗದ ಸೀಟ್‌ನಲ್ಲಿ ವಿನಯ್ ಬಂದು ಕುಳಿತರು. ನಾನು ಯಶಸ್ ಸೂರ್ಯ, ಚಿಕ್ಕಣ್ಣ ಬರಬೇಕಾ ಎಂದು ಕೇಳಿದೆ. ಅದಕ್ಕೆ ದರ್ಶನ್ ‘ಅವರು ಬೇಡ, ನಾವು ಹೋಗೋಣ’ ಎಂದರು. ನಾನು ಕಾರನ್ನು ಮೂವ್ ಮಾಡಿದೆ. ನಾಗರಾಜ್ ಕುಳಿತಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ನಮ್ಮ ಕಾರನ್ನು ಫಾಲೋ ಮಾಡಿಕೊಂಡು ಬರುತ್ತಿತ್ತು. ಅದರ ಹಿಂದೆ ವಿನಯ್ ಅವರ ಕೆಂಪು ಬಣ್ಣದ ಜೀಪ್ (KA-04-NA-0006) ಅದರ ಹಿಂದೆ ಬಾಡಿಗಾರ್ಡ್ಸ್‌ಗಳು ಇದ್ದ ಫೋರ್ಡ್ ಎಂಡೆವ‌ ಕಾರು ನಮ್ಮ ಕಾರನ್ನು ಫಾಲೋ ಮಾಡುತ್ತಿತ್ತು.
ಮುಂದುವರಿಯುವುದು…

Tags:
error: Content is protected !!