Mysore
22
overcast clouds

Social Media

ಸೋಮವಾರ, 08 ಜೂನ್ 2026
Light
Dark

ಕಲಾಕೃತಿ ಮೂಲಕ ತ್ಯಾಜ್ಯ ನಿರ್ವಹಣಾ ಜಾಗೃತಿ

ಎಚ್.ಎಸ್.ದಿನೇಶ್‌ಕುಮಾರ್

ಕಸ ಎಸೆಯುವ ಹಾಟ್ ಸ್ಪಾಟ್‌ಗಳಲ್ಲಿ ತ್ಯಾಜ್ಯಗಳಿಂದಲೇ ‘ಕಲಾಕೃತಿ’ ರಚನೆ!; ಜನರಲ್ಲಿ ಅರಿವು ಮೂಡಿಸುತ್ತಿರುವ ಪೌರಕಾರ್ಮಿಕರು

ಮೈಸೂರು: ಸಿಕ್ಕಸಿಕ್ಕಲ್ಲಿ ಕಸ ಎಸೆಯುವ ಮೂರ್ಖ ಜನರಿಗೆ ಇದೀಗ ಪೌರಕಾರ್ಮಿಕರೇ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹಳೆಯ ಟೈರ್‌ಗಳ, ಮರದ ಕೊಂಬೆಗಳನ್ನು ಬಳಸಿ ಹೆಚ್ಚು ಕಸ ಎಸೆಯವ ಸ್ಥಳಗಳಲ್ಲಿ ಕಲಾಕೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಪೌರಕಾರ್ಮಿಕರ ಈ ಕೆಲಸ ಮೆಚ್ಚುವಂತಹದ್ದಾದರೂ ಕೂಡ, ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರು ತಮ್ಮ ನಿತ್ಯದ ಕಾಯಕದೊಂದಿಗೆ ಜಾಗೃತಿಯನ್ನೂ ಮೂಡಿಸುವಂತಹ ಕೆಲಸವನ್ನೂ ಮಾಡ ಬೇಕಾಯಿತೇ ಎಂಬುದನ್ನು ಯೋಚಿಸಬೇಕಿದೆ.

ಸ್ವಚ್ಛತೆಯಲ್ಲಿ ಮೈಸೂರು ನಗರವು ೨ ಬಾರಿ ದೇಶದಲ್ಲಿಯೇ ಮೊದಲನೇ ಸ್ಥಾನ ಪಡೆದದ್ದುದು ಎಲ್ಲರಿಗೂ ಗೊತ್ತು. ನಂತರದ ದಿನಗಳಲ್ಲಿ ಇದು ಕುಸಿತ ಕಂಡಿದೆ. ಕಾರಣ ಜನರ ನಡವಳಿಕೆ. ಇದು ನಮ್ಮ ನಗರ, ಸ್ವಚ್ಛವಾಗಿಡಬೇಕು ಎಂಬ ಮನಸ್ಥಿತಿಯಲ್ಲಿ ಯಾರೂ ಇಲ್ಲದಿರುವುದು.

ಕೆ.ಜಿ.ಕೊಪ್ಪಲು, ಕುಂಬಾರಕೊಪ್ಪಲು, ಪಡುವಾರಹಳ್ಳಿ ಸೇರಿದಂತೆ ನಗರದಾದ್ಯಂತ ಸಾಕಷ್ಟು ಹಳೆಯ ವಸತಿ ಪ್ರದೇಶಗಳಿವೆ. ಇದರ ಜೊತೆಗೆ ಶೇ.೮೦ ರಷ್ಟು ಮಂದಿ ಸುಶಿಕ್ಷಿತರೇ ಇರುವ ಜಯಲಕ್ಷಿ ಪುರಂ, ಕುವೆಂಪುನಗರ, ವಿವೇಕಾನಂದ ನಗರ, ಯಾದವಗಿರಿ, ಸರಸ್ವತಿಪುರಂ, ಜೆ.ಪಿ.ನಗರ ಸೇರಿದಂತೆ ಸಾಕಷ್ಟು ಬಡಾವಣೆಗಳೂ ಇವೆ. ಆದರೆ, ಸಿಕ್ಕಸಿಕ್ಕಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಮಾತ್ರ ಯಾರೂ ಹೊರತಲ್ಲ. ರಸ್ತೆಯ ತುದಿಯಲ್ಲಿ ಜನರು ಕಸ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅದು ಅವರಿಗೆ ಅಭ್ಯಾಸವೂ ಆಗಿಹೋಗಿದೆ. ಅಂತಹ ಕಡೆಗಳಲ್ಲಿ ಪೌರಕಾರ್ಮಿಕರು ಗೊಣಗುತ್ತಲೇ ಕಸ ವಿಲೇವಾರಿ ಮಾಡುತ್ತಿದ್ದಾರೆ. ಆದರೆ, ನಿಜವಾದ ಸಮಸ್ಯೆ ಇರುವುದು ಸುಶಿಕ್ಷಿತರು ಇರುವ ಕಡೆಗಳಲ್ಲಿ. ಅವರುಗಳು ಸ್ಕೂಟರ್‌ನಲ್ಲಿ, ಬೈಕ್‌ನಲ್ಲಿ ಅಥವಾ ಕಾರಿನಲ್ಲಿ ಬಂದು ರಸ್ತೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಸಿಕ್ಕಸಿಕ್ಕಲ್ಲಿ ಕಸ ಎಸೆದು ಹೋಗುತ್ತಾರೆ. ಇದರಿಂದ ಬೇಸತ್ತ ಪೌರ ಕಾರ್ಮಿಕರು ಕಸ ಎಸೆಯುವ ಜನರಿಗೆ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರುಗಳಿಗೆ ನಗರಪಾಲಿಕೆ ಅಽಕಾರಿಗಳೂ ಸಾಥ್ ನೀಡುತ್ತಿದ್ದಾರೆ.

ಕಸವೇ ರಸ: ಜನರು ಎಲ್ಲಿ ಕಸವನ್ನು ಹೆಚ್ಚು ಎಸೆಯುತ್ತಿದ್ದಾರೆ ಎಂಬ ಸ್ಥಳಗಳನ್ನು ಗುರುತಿಸಿರುವ ಪೌರಕಾರ್ಮಿಕರು ರಸ್ತೆ ಬದಿಯಲ್ಲಿ ಬಿದ್ದಿರುವ ಹಳೆಯ ಟೈರ್‌ಗಳು, ಬಿದಿರಿನ ಕಟ್ಟಿಗಳು, ಮರದ ಸಣ್ಣ ರಂಬೆಗಳನ್ನು ಕಳಸಿ ಅಲ್ಲಿ ಕೃತಕ ಅಲಂಕಾರಿಕ ಬೇಲಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕುವೆಂಪುನಗರ, ಹೆಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ, ಎನ್.ಆರ್.ಕ್ಷೇತ್ರದ ಕೆಲ ರಸ್ತೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಮಾಡಿದ್ದಾರೆ. ಕೃತಕ ಬೇಲಿಯ ಮೇಲೆ ಇಲ್ಲಿ ದಯವಿಟ್ಟು ಕಸವನ್ನು ಹಾಕಬೇಡಿ ಎಂದು ಬರೆಸಿದ್ದಾರೆ. ಅಲ್ಲಿ ದೇವರ ಚಿತ್ರಪಟವನ್ನೂ ಅಳವಡಿಸುತ್ತಿದ್ದಾರೆ. ಇಲ್ಲಿ ಮೊದಲಬಾರಿ ಕಸ ಎಸೆದಲ್ಲಿ ೫೦೦ ರೂ. ದಂಡ, ಎರಡನೇ ಬಾರಿ ಕಸ ಎಸೆದವರಿಗೆ ೧೦೦೦ ರೂ. ದಂಡ, ಪದೇಪದೇ ಸಿಕ್ಕಿಹಾಕಿಕೊಂಡಲ್ಲಿ ನೊಕದ್ದಮೆ ದಾಖಲಿಸಲಾಗುವುದು ಎಂದು ಫಲವನ್ನು ಅಳವಡಿಸುವ ಕೆಲಸ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮುಖ ಸ್ಥಳಗಳಲ್ಲಿ ಈ ಕೆಲಸವನ್ನು ಮಾಡಲಾಗುವುದು ಎಂದು ಅವರು ಹೇಳುತ್ತಾರೆ. ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಜನರು ಆರೋಗ್ಯವಾಗಿರಬೇಕಾದಲ್ಲಿ ನಗರವನ್ನು ಸ್ವಚ್ಛವಾಗಿಡಬೇಕು ಎನ್ನುತ್ತಾರೆ.

” ನಗರವನ್ನು ಸ್ವಚ್ಛವಾಗಿಡಬೇಕು ಎಂಬುದು ನಮ್ಮ ಬಯಕೆ. ಈ ನಿಟ್ಟಿನಲ್ಲಿ ನಾವು ಹಾಗೂ ಪೌರಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಕಸ ಎಸೆಯುವವರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಅಲಂಕಾರಿಕ ಬೇಲಿಗಳ ನಿರ್ಮಾಣ ಮಾಡುತ್ತಿ ದ್ದೇವೆ. ಪ್ರಸಕ್ತ ಸಾಲಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ೭.೫೦ ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.”

-ಮೃತ್ಯುಂಜಯ, ಎಇಇ(ಪರಿಸರ), ಮಹಾನಗರಪಾಲಿಕೆ 

 

Tags:
error: Content is protected !!