Mysore
29
scattered clouds
Light
Dark

ವೀರಗಾಸೆಯ ವೀರ ಶೃಂಗಾರ ಶಾಸ್ತ್ರೀ

ಸರಗೂರು ದಾಸೇಗೌಡ

ಕಲೆ ಮತ್ತು ಸಾಹಿತ್ಯ ಪ್ರಕಾರಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿಯೂ ಕಲೆಯನ್ನು ಉಳಿಸಿ ಪೋಷಿಸುತ್ತಿರುವವರು ಗ್ರಾಮೀಣ ಭಾಗದ ಜನರು ಎಂದರೆ ತಪ್ಪಾಗಲಾರದು. ಪ್ರತಿ ಗ್ರಾಮದಲ್ಲಿಯೂ ಒಂದಲ್ಲ ಒಂದು ಜಾನಪದ ಕಲೆ ಪ್ರಕಾರ ಇನ್ನೂ ಜೀವಂತವಾಗಿದೆ. ರಾಜ್ಯದಾದ್ಯಂತ ಅದನ್ನು ಪ್ರಚಾರ ಪಡಿಸುವ ಪ್ರಯತ್ನವೂ ಸಾಗಿದೆ. ಅಂಹತ ಒಂದು ಕಲೆಯಲ್ಲಿ ವೀರಗಾಸೆಯೂ ಒಂದು.

ವೀರಗಾಸೆ ಎಂಬುದು ಬರೀ ಕಲೆ ಅಲ್ಲ. ಅದು ದೈವ ಕಲೆ. ದುರುಳ ದಕ್ಷಬ್ರಹ್ಮನ ಶಿರವನ್ನು ಹರಿದು, ಹರಿದ ತಲೆಗೆ ಕುರಿಯ ತಲೆಯನ್ನು ಇಟ್ಟ ದೊರೆಯೆ ನಿನಗೆ ಯಾರು ಸರಿ. ಸರಿ ಸರಿ ಎಂದವರ ಸೊಕ್ಕನ್ನು ಮುರಿ, ಮಹಾರುದ್ರ
ಆಹಾರುದ ಆಹಾ ದೇವ, ದೇವ ದೇವ ಮಹಾದೇವ ಎಂದು ಖಡ್ಗ ಪ್ರವಚನವನ್ನು ನುಡಿಯುತ್ತ ವೀರ ಗಾಸೆಯ ದೈವ ಕಲೆ ಯನ್ನು ವಂಶ ಪಾರಂ ಪರಿಕವಾಗಿ ನಡೆದು ಕೊಂಡು ಬಂದಿರು ವಂತಹ ಸಾಂಪ್ರದಾ ಯವೇ ಈ ‘ವೀರ ಗಾಸೆ, ಇಂತಹ ಕಲೆಯನ್ನು ಚಿಕ್ಕ ವಯಸ್ಸಿನಲ್ಲೇ ಮೈಗೂಡಿಸಿಕೊಂಡು ರಾಜ್ಯದಾದ್ಯಂತ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರ ಸಂತೆ ಹೋಬಳಿಯ ಮಾಗುಡಿಲು ಗ್ರಾಮದ ಗೌರಮ್ಮ ಮತ್ತು ಶಿವಾರ್ಚಕ ಉಪೇಂದ್ರಪ್ಪನವರ ಪುತ್ರ ಶೃಂಗಾ‌ ಶಾಸ್ತ್ರೀ ರಾಜ್ಯದ ಹಲವೆಡೆ ಪ್ರದರ್ಶನ ನೀಡಿರುವು ದಲ್ಲದೇ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ‘ಈಡನ್ಸ್ ನ್ಯೂಸ್ ವಾಹಿನಿಯಲ್ಲಿ ವೀರಭದ್ರ ಚರಿತ್ರೆ ಎಂಬ ಸಂದರ್ಶನವನ್ನು ನೀಡಿದ್ದಾರೆ. ಇದರೊಂದಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಎರಡು ಬಾರಿ ವೀರಗಾಸೆ ಪ್ರದರ್ಶನವನ್ನು ನೀಡಿರುವ ಕೀರ್ತಿ ಇವರಿಗಿದೆ. ಶೈವ ಸಾಂಪ್ರದಾಯವುಳ್ಳ ವಂಶ ಪಾರಂಪರಿಕವಾಗಿ ಬಂದಿ ರುವಂತಹ ಪವಿತ್ರ ಕುಣಿತವನ್ನು 26 ವರ್ಷ ವಯಸ್ಸಿನ ಶೃಂಗಾರ ಶಾಸ್ತ್ರೀಯವರು ಮೊಟ್ಟ ಮೊದಲ ಬಾರಿಗೆ 2004ರಲ್ಲಿ ತಾತ ಶಿವಾರ್ಚಕ ಬಸವಣ್ಣನವರ ಬಳಿ ಕಲಿತರು. ಅಲ್ಲದೆ ಮೊದಲ ಬಾರಿಗೆ ಚಾ.ನಗರ ಜಿಲ್ಲೆಯ ಅರಳಿಕಟ್ಟೆ ಎಂಬ ಗ್ರಾಮದ ಮದುವೆ ಒಂದರಲ್ಲಿ ಪ್ರದರ್ಶನ ಮಾಡಿದರು. ಅದರೊಂದಿಗೆ ಶಿಕ್ಷಣವನ್ನು ಮುಂದುವರಿಸುತ್ತಾ ರಜಾ ದಿನಗಳಲ್ಲಿ ವೀರಗಾಸೆಯನ್ನೂ ಮಾಡುತ್ತಾ ಪ್ರಸ್ತುತ ಮಾಗುಡಿ ಲಿನ ಶ್ರೀ ನೀಲಕಂಠೇಶ್ವರ ಸ್ವಾಮಿ ಮಾಗುಡಿಲು ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಂಶಪಾರಂಪರಿಕವಾಗಿ ಬಂದಿರುವಂತಹ ಈ ವೀರಗಾಸೆ ನೃತ್ಯವನ್ನು ಶಾಲೆಯಲ್ಲಿ ವ್ಯಾಸಂಗ ಮಾಡುವ ವೇಳೆ ಛದ್ಧವೇಶದಲ್ಲಿ ಧರಿಸಿ ಬಳಿಕ ಅದರ ಮೇಲಿನ ಆಸಕ್ತಿ ಹೆಚ್ಚಾಗಿ ಶಿಕ್ಷಣ ಮುಗಿಸಿದ ಬಳಿಕ ಅಲ್ಲಿಂದ ವೀರಗಾಸೆಯ ಬಗ್ಗೆ ಮತ್ತಷ್ಟು ಆಸಕ್ತಿ ಹೆಚ್ಚಾಗಿ ವೀರಗಾಸೆಯನ್ನೇ ವೃತ್ತಿ ಬದುಕಿನಲ್ಲಿ ಮುಂದುವರಿಸುತ್ತಾ ‘ಶ್ರೀ ವೀರಭದ್ರೇಶ್ವರ ಲಿಂಗದ ವೀರರ ವೀರಗಾಸೆ ನೃತ್ಯ ತಂಡ’ ಎಂದು ಮಾಡಿಕೊಂಡು ವೀರಗಾಸೆಯ ಕುಣಿತದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಂಪ್ರಾದಾಯಿಕ ಕುಣಿತಗಳು, ಸಾಹಿತ್ಯ, ಕಲೆ ಪ್ರಕಾರಗಳು ನಶಿಸಿ ಹೋಗುತ್ತಿವೆ. ನಮ್ಮ ಕಲೆ, ಸಾಹಿತ್ಯ ಪ್ರಕಾರಗಳನ್ನು ನಾವು ಪೋಷಿಸಿ ಬೆಳೆಸಬೇಕು. ವೀರಗಾಸೆ ನಮ್ಮ ವಂಶಪಾರಂಪರೆಯಾಗಿ ಬಂದ ಕುಣಿತವಾಗಿದ್ದು, ಅದನ್ನು ಮುಂದುವರಿಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆ.

-ಶೃಂಗಾ‌ ಶಾಸ್ತ್ರೀ, ವೀರಗಾಸೆ ಕಲಾವಿಧ