Mysore
25
scattered clouds
Light
Dark

ಇಂದಿನಿಂದ ಜೂ 4ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು: ಮೂಲಸ್ಥಾವರದ ಜಲಶುದ್ದೀಕರಣ ಘಟಕದಲ್ಲಿ ತುರ್ತಾಗಿ ನಿರ್ವಹಣೆಯನ್ನು ಕೈಗೆತ್ತಿಕೊಂಡಿರುವುದರಿಂದ ಮೇ 30ರಿಂದ ಜೂ.4ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಬಿನಿ ಜಲಾಶಯದಿಂದ ಮೂಲ ಸ್ಥಾವರಕ್ಕೆ ನೀರು ಸರಬರಾಜು ಆಗುತ್ತಿದ್ದು, ನದಿಗೆ ಮಳೆ ನೀರು ಸೇರುತ್ತಿದ್ದು, ನೀರಿನಲ್ಲಿ ಬಗ್ಗಡ, ಸಾಂದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಲಶುದ್ದೀಕರಣ ಘಟಕದಲ್ಲಿ ತುರ್ತು ನಿರ್ವಹಣೆ ಕೈಗೊಳ್ಳಲಾಗುತ್ತಿದ್ದು, ವಾರ್ಡ್ ನಂ-44 ರಿಂದ 51ರವರೆಗೆ (ಜನತಾನಗರ, ಶಾರದಾದೇವಿ ನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ), 54 ಮತ್ತು 65(ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ ಸಿಐಟಿಬಿ, ರಾಮಕೃಷ್ಣ ನಗರ, ಕುವೆಂಪುನಗರ ಎಂ ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಜೆ.ಪಿ.ನಗರ, ಅರವಿಂದ ನಗರ, ಶ್ರೀರಾಂಪುರ) ಇತ್ಯಾದಿ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ(ಪೂ) ವಿಭಾಗದ ಕಾರ್ಯಪಾಲಕ ಇಂಜಿನಿಯ‌ರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.