Mysore
29
few clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಒಳಚರಂಡಿ ಸಮಸ್ಯೆ : ದೂರು ಬಂದ್ರೆ ತಕ್ಷಣವೇ ಕ್ರಮ

mysurru

ಮೈಸೂರು: ಮಳೆಯ ಸಂದರ್ಭದಲ್ಲಿ ಪ್ರಮುಖ ವಾಗಿ ಒಳಚರಂಡಿ ವ್ಯವಸ್ಥೆಯಲ್ಲಿನ ತೊಂದರೆಗಳಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾಗುತ್ತವೆ. ಇದಕ್ಕಾಗಿಯೇ ನಗರಪಾಲಿಕೆ ಯಲ್ಲಿ ಪ್ರತ್ಯೇಕ ಯುಜಿಡಿ ವಿಭಾಗವಿದೆ. ಇಲ್ಲಿ ಸುಮಾರು ೧೨ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಾರೆ. ಅವರಲ್ಲಿ ಕಾರ್ಯಪಾಲಕ ಇಂಜಿನಿಯರ್ ಅಶ್ವಿನ್ ಕೂಡ ಒಬ್ಬರು. ಮಳೆಯ ಸಂದರ್ಭದಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರು ‘ಆಂದೋಲನ’ ದಿನಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಮಳೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನನುಕೂಲವಾಗದಂತೆ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?
ಅಶ್ವಿನ್: ಮಳೆಯ ಸಂದರ್ಭದಲ್ಲಿ ಒಳಚರಂಡಿ ಸಮಸ್ಯೆಗಳಿಗೆ ಸಂಬಂಽಸಿದಂತೆ ನಿತ್ಯ ಸರಾಸರಿ ೩೦ ದೂರುಗಳು ದಾಖಲಾಗುತ್ತವೆ. ದೂರು ಬಂದ ತಕ್ಷಣವೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುತ್ತಾರೆ.

ಆಂದೋಲನ: ಸಮಸ್ಯೆ ಸರಿಪಡಿಸಲು ಅಗತ್ಯ ಯಂತ್ರೋಪಕರಣಗಳು ಲಭ್ಯವಿವೆಯೇ?
ಅಶ್ವಿನ್: ಹೌದು, ನಮ್ಮಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ೧೬ ಜೆಟ್ಟಿಂಗ್ ಯಂತ್ರಗಳು, ೩೫ ಜೆಸಿಬಿ ಯಂತ್ರಗಳಿವೆ. ಮಳೆಯ ಸಂದರ್ಭದಲ್ಲಿ ರಾತ್ರಿ ಪಾಳಿಯಲ್ಲಿಯೂ ನಮ್ಮ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ.

ಆಂದೋಲನ: ಮಳೆಗಾಲ ಆರಂಭಕ್ಕೂ ಮುನ್ನ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೀರಿ? ಅಶ್ವಿನ್: ಮಳೆಗಾಲ ಆರಂಭಕ್ಕೂ ಎರಡು ತಿಂಗಳು ಮುಂಚೆಯೇ ದೊಡ್ಡ ಹಾಗೂ ಸಣ್ಣ ಮೋರಿಗಳಲ್ಲಿ ಹೂಳು ಎತ್ತುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ಬಡಾವಣೆಗಳಲ್ಲಿಯೂ ಮೋರಿಗಳು ಹಾಗೂ ಒಳ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ.

ಆಂದೋಲನ: ನಗರಪಾಲಿಕೆ ವತಿಯಿಂದ ಹೆಚ್ಚುವರಿ ಯಂತ್ರಗಳ ಖರೀದಿ ಆಗುತ್ತಿದೆಯೇ? ಅಶ್ವಿನ್: ಹೌದು. ನಗರ ಹೆಚ್ಚು ಹೆಚ್ಚು ಬೆಳವಣಿಗೆ ಯಾಗುತ್ತಿದೆ. ಈಗಿರುವ ಜೊತೆಗೆ ಮತ್ತಷ್ಟು ಉಪ ಕರಣಗಳ ಅಗತ್ಯವಿದೆ. ಹೀಗಾಗಿ ೬ ಜೆಟ್ಟಿಂಗ್ ಯಂತ್ರಗಳ ಖರೀದಿಗೆ ಹಣ ಬಿಡುಗಡೆಯಾಗಿದೆ. ಜೆಸಿಬಿ ಯತ್ರಗಳ ಖರೀದೀಗೂ ಚಿಂತನೆ ನಡೆದಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.

Tags:
error: Content is protected !!