Mysore
25
overcast clouds
Light
Dark

ನಗರದಲ್ಲಿ ಇಂದು: ಮೈಸೂರಿನ ಈ ದಿನದ ಕಾರ್ಯಕ್ರಮಗಳು

mysore programs list
  • ರಾಜ್ಯಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ಮತ್ತು ಚರ್ಚಾಸ್ಪರ್ಧೆ
    ಬೆಳಿಗ್ಗೆ 10ಕ್ಕೆ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಉದ್ಘಾಟನೆ-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿವರಾಂಪೇಟೆ ಶಾಖೆಯ ವ್ಯವಸ್ಥಾಪಕ ಅರ್ಷಿಂದರ್ ಜೀತ್ ಕೌರ್, ಮುಖ್ಯ ಅತಿಥಿ-ಸಂಗೀತ ಸ್ಪರ್ಧೆ ಪ್ರಾಯೋಜಕರಾದ ರಾಜ್‌ಮತಿ ಕೆ. ಅರಸ್, ಅಧ್ಯಕ್ಷತೆ-ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತ ಕುಮಾರ್, ಬಹುಮಾನ ವಿತರಣೆ- ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ವಿಶ್ರಾಂತ ಹಿರಿಯ ವಿಭಾಗೀಯ ವ್ಯವಸ್ಥಾಪಕ ಮಹೇಶ್ ಎನ್. ಅರಸ್, ಸ್ಥಳ-ಕಾಲೇಜಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ.
  • ರಾಮ್‌ಸನ್ಸ್ ಕ್ರೀಡಾ ಕೌಶಲ
    ಬೆಳಿಗ್ಗೆ 10ರಿಂದ, ಸ್ಥಳ-ರಾಮ್‌ನ್ಸ್, ಹ್ಯಾಂಡಿಕ್ರಾಪ್ಸ್ ಸೇಲ್ಸ್ ಎಂಪೋರಿಯಂ, ಮೃಗಾಲಯದ ಎದುರು.
  • ಪ್ರದರ್ಶನ ಕಲೆ ಮತ್ತು ಮಾಧ್ಯಮ: ಸಾಂಸ್ಕೃತಿಕ ದೃಷ್ಟಿಕೋನಗಳು
    ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘ, ಉದ್ಘಾಟನೆ-ಸಂಗೀತ ನಿರ್ದೇಶಕ ಹಂಸಲೇಖ, ಮುಖ್ಯ ಭಾಷಣಕಾರರು-ಯುಎಸ್‌ಎ ಬ್ರಾಂಡೈಸ್ ವಿವಿಯ ಪ್ರೊ.ಗೌರಿ ವಿಜಯಕುಮಾರ್, ಕೊಪ್ಪಳ ವಿವಿ ಕುಲಪತಿ-ಪ್ರೊ.ಬಿ.ಕೆ.ರವಿ, ಕೆಎಸ್‌ ಜಿಎಚ್‌ಎಂ ವಿವಿ ಪ್ರಭಾರ ಕುಲಸಚಿವರಾದ ಕೆ.ಎಸ್.ರೇಖಾ, ಅಧ್ಯಕ್ಷತೆ-ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು
    ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಸಮಾರೋಪ ಭಾಷಣ: ಎನ್‌ಎಸಿಸಿ ಮಾಜಿ ನಿರ್ದೇಶಕ ಎಸ್.ಸಿ.ಶರ್ಮಾ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಕೃಪಾ ಫಡೈ, ಸ್ಥಳ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ.
  • ಜೀವನಿಧಿ ಕಾವೇರಿ ಪ್ರಶಸ್ತಿ ಪ್ರದಾನ ಸಮಾರಂಭ
    ಬೆಳಿಗ್ಗೆ 10.30ಕ್ಕೆ, ಬಾರಿಸು ಕನ್ನಡ ಡಿಂಡಿಮವ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ, ಮುಖ್ಯ ಅತಿಥಿ-ಹಿರಿಯ ಸಾಹಿತಿ ಬನ್ನೂರು ಕೆ. ರಾಜು, ಪ್ರಶಸ್ತಿ ಪ್ರದಾನ-ಖ್ಯಾತ ನೃತ್ಯ ಕಲಾವಿದರಾದ-ಡಾ.ತುಳಸಿ ರಾಮಚಂದ್ರ, ಅಭಿನಂದನಾ ಭಾಷಣ-ಲೇಖಕರಾದ ಡಾ.ಜಮುನಾರಾಣಿ ಮಿರ್ಲೆ, ಪ್ರಶಸ್ತಿ ಪುರಸ್ಕೃತರು-ಪ್ರಖ್ಯಾತ ಶಿಲ್ಪಿ ಎ.ಕಿರಣ್ ಸುಬ್ಬಯ್ಯ, ಅಧ್ಯಕ್ಷತೆ-ಕಾವೇರಿ ಬಳಗದ ಅಧ್ಯಕ್ಷರಾದ ಎನ್.ಕೆ.ಕಾವೇರಿಯಮ್ಮ, ಸ್ಥಳ-ಅಕ್ಕನ ಬಳಗ ಶಾಲಾ ಆವರಣ, 4ನೇ ತಿರುವು, ತ್ಯಾಗರಾಜ ರಸ್ತೆ.
  • ಕಾಲೇಜು ವಾರ್ಷಿಕೋತ್ಸವ ಬೆಳಿಗ್ಗೆ 11ಕ್ಕೆ, ಯುವರಾಜ ಕಾಲೇಜು,
    ಉದ್ಘಾಟನೆ-ಅಂತರರಾಷ್ಟ್ರೀಯ ಖೋಖೋ ಕ್ರೀಡಾಪಟು, ಭಾರತೀಯ ಅಂಚೆ ಇಲಾಖೆಯ ಎಂ.ವೀಣಾ, ಮುಖ್ಯ ಅತಿಥಿ-ಕನ್ನಡ ಕಿರುತೆರೆಯ ನಟ ರಿತ್ವಿಕ್ ಕೃಪಾಕರ್, ಸಂಗೀತ ನಿರ್ದೇಶಕ ಪಿ.ನೀತು ನಿನಾದ್‌, ಅಧ್ಯಕ್ಷತೆ- ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಕೆ.ಮಹೇಶ್, ಸ್ಥಳ- ಅಮೃತ ಮಹೋತ್ಸವ ಸಭಾಂಗಣ
  • ಹೂಡಿಕೆದಾರರ ಜಾಗೃತಿ ಉಪನ್ಯಾಸ ಕಾರ್ಯಕ್ರಮ
    ಬೆಳಿಗ್ಗೆ 11.30ಕ್ಕೆ, ಟಿಟಿಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ
    ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪಿಯು ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ, ಅಧ್ಯಕ್ಷತೆ-ಟಿಟಿಎಲ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ಪ್ರಶಾಂತ್, ಮುಖ್ಯ ಅತಿಥಿ- ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್‌ನ ಶ್ರೀ ವಾಸುದೇವ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಿಯೋಜಿತ್ ಶಾಖೆ ಮುಖ್ಯಸ್ಥ ಡಿ.ಅಭಿಶಾ, ಸ್ಥಳ-ಟಿಟಿಎಲ್ ಕಾಲೇಜು ಆವರಣ.