Mysore
25
broken clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಎಚ್‌ಡಿ ಕೋಟೆ: ಹುಲಿ ಸೆರೆ ಕಾರ್ಯಾಚರಣೆ ಬಿರುಸು

ಎಚ್. ಡಿ. ಕೋಟೆ: ತಾಲ್ಲೂಕಿನ ಶಾಂತಿಪುರ, ಬೋಚಿಕಟ್ಟೆ ಚಾಕಹಳ್ಳಿ, ಕೆ. ಜಿ. ಹುಂಡಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ವಿಶೇಷ ಹುಲಿ ಸಂರಕ್ಷಣಾ ದಳ ಸಿಬ್ಬಂದಿ ಹಾಗೂ ಚಿರತೆ ಕಾರ್ಯಪಡೆಯೊಂದಿಗೆ ಹುಲಿ ಹಿಮ್ಮೆಟ್ಟಿಸುವ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಕೋಟೆ ವಲಯ ಅರಣ್ಯ ಅಧಿಕಾರಿ ಪೂಜಾ ತಿಳಿಸಿದ್ದಾರೆ.

ಶಾಂತಿಪುರ, ಬೋಚಿಕಟ್ಟೆ ಗ್ರಾಮಗಳ ಬಳಿ ಕೂಂಬಿಂಗ್ ನಡೆಸಿದ್ದು, ಹಳೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಸಂಜೆ ಸುಮಾರು ೪:೩೦ ಗಂಟೆ ಸಮಯದಲ್ಲಿ ಕೆ. ಜಿ. ಹುಂಡಿ ಗ್ರಾಮದಲ್ಲಿ ಹುಲಿ ಮೇಕೆಯನ್ನು ತಿಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನೋಡಿದಾಗ ಸದರಿ ಮೇಕೆಯ ಮೇಲೆ ಮೇಲ್ನೋಟಕ್ಕೆ ಚಿರತೆ, ಹುಲಿ ಅಥವಾ ಯಾವುದೇ ವನ್ಯ ಪ್ರಾಣಿ ದಾಳಿ ಮಾಡಿರುವ ಕುರು ಹುಗಳು ಕಂಡು ಬಂದಿಲ್ಲ. ಹೆಚ್ಚಿನ ವಿವರಗಳು ಪಶುವೈದ್ಯಕೀಯ ಪರೀಕ್ಷೆ ವರದಿಯ ನಂತರ ಲಭಿಸಲಿವೆ ಎಂದು ತಿಳಿಸಿದ್ದಾರೆ. ಚಾಕಳ್ಳಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಹುಲಿ ಸೆರೆ ಕಾರ್ಯಾಚರಣೆ ಸ್ಥಳದಲ್ಲಿ ಹುಲಿ ಚಲನವಲನ ಪತ್ತೆಗೆ ಟ್ರಾಪ್ ಕ್ಯಾಮೆರಾಗಳು, ನೆಟ್ವರ್ಕ್ ಕ್ಯಾಮೆರಾಗಳು, ಡ್ರೋನ್, ಬೋನುಗಳನ್ನು ಬಳಸಲಾಗುತ್ತಿದೆ. ಸಾರ್ವಜನಿಕರು ಹುಲಿ ಚಲನವಲನ ಕಂಡಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ: ೯೪೮೧೯೯೬೦೨೬ ಅಥವಾ ೧೯೨೬ಗೆ ಮಾಹಿತಿ ನೀಡಬೇಕು. ಹುಲಿ ಕುರಿತಂತೆ ಯಾವುದೇ ಸುಳ್ಳು ಸುದ್ದಿ ವದಂತಿ ಹಬ್ಬಿಸಬಾರದು ಎಂದು ಮನವಿ ಮಾಡಿದ್ದಾರೆ.

 

 

Tags: