ಕಲಾಲೋಕದ ಅಪರಂಜಿ!
ಅಸ್ತಂಗತವಾಯಿತು
ಬೆಳ್ಳಿತೆರೆಯ ಅಪ್ಪಟ ಬಂಗಾರ!
ಬಹುಭಾಷಾ ನಟಿಯಾದರೂ
ಕನ್ನಡ ಕಲಾಲೋಕದ ಅಪರಂಜಿ!
ಪುರಾಣ ಚರಿತ್ರೆಗಳು
ಮರುಜೀವ ಪಡೆಯುತ್ತಿದ್ದವು
ನಿಮ್ಮ ಅಭಿನಯ ವೈಭವದಲಿ!
ಬೆಳಗಿಸಿದಿರಿ
ಕನ್ನಡ ಕಲಾಲೋಕವನು
ನಿಮ್ಮ ಪ್ರತಿಭಾ ಹಣತೆಯಲಿ!
ಜಗಕೆ ಮಾದರಿ
ನಿಮ್ಮ ಕಲಾಪರಿಣತಿ ಸಿದ್ಧಿ!
ನೀವಾದಿರಿ ನಿಜದಲಿ
ಕಲಾತಪಸ್ವಿನಿ ಅಭಿನಯ ಸರಸ್ವತಿ!
ನಿಮಗಿದೋ ಪ್ರೀತಿಯ ನುಡಿನಮನ
ಬಿ.ಸರೋಜಾದೇವಿಯವರೆ!
–ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು





