Mysore
29
broken clouds

Social Media

ಬುಧವಾರ, 14 ಜನವರಿ 2026
Light
Dark

ದಸರೆಗೆ ಸಿಂಗಾರಗೊಳ್ಳುತ್ತಿದೆ ಅರಮನೆ ನಗರ

 ಕೆ.ಬಿ.ರಮೇಶ ನಾಯಕ

ನಾಡಹಬ್ಬ ದಸರಾ ಮಹೋತ್ಸವ ವಿಧ್ಯುಕ್ತ ಚಾಲನೆಗೆ ಐದೇ ದಿನ ಬಾಕಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರೆಗೆ ಅರಮನೆ ನಗರಿ ಮೈಸೂರು ಮದುವಣಿಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡುವುದಕ್ಕೆ ಐದೇ ದಿನಗಳು ಬಾಕಿ ಇರುವುದರಿಂದ ಉಪಸಮಿತಿಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳು ಅಂತಿಮ ಹಂತದ ಸಿದ್ಧತೆಯಲ್ಲಿ ನಿರತ ರಾಗಿದ್ದಾರೆ.

ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಚಾಮರಾಜ ವೃತ್ತದ ಗೋಪುರಗಳಿಗೆ ಬಣ್ಣ ಬಳಿಯಲಾಗಿದ್ದು, ಪ್ರತಿಮೆ ಗಳನ್ನು ಸ್ವಚ್ಛಗೊಳಿಸಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದ ಫುಟ್‌ಪಾತ್‌ಗಳ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ. ಸಮಸ್ಯೆ ಇರುವ ಕಡೆ ಗಳಲ್ಲಿ ಒಳಚ ರಂಡಿ ದುರಸ್ತಿಗೊಳಿಸಲಾಗುತ್ತಿದೆ. ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಕೆ.ಆರ್.ವೃತ್ತದಲ್ಲಿ ತ್ರೀಡಿ ಪೇಂಟಿಂಗ್ ಸೇರಿದಂತೆ ಇನ್ನಿತರೆ ಸಿಂಗಾರಕ್ಕೆ ಗಮನಹರಿಸಲಾಗಿದೆ.

ಅರಮನೆಗೆ ಸಿಂಗಾರ: ಅರಮನೆಯ ದರ್ಬಾರ್ ಹಾಲ್, ಆನೆ ಬಾಗಿಲಿನ ಬಳಿಯ ಚಾವಣಿ, ಗ್ಯಾಲರಿ ಸೇರಿ ದಂತೆ ಒಳ ಆವರಣದಲ್ಲಿ ಬಣ್ಣ ಬಳಿಯುವ ಕೆಲಸ ಬಹು ತೇಕ ಮುಗಿದಿದೆ. ವಿದ್ಯುತ್ ದೀಪಗಳನ್ನು ಎಲೆಕ್ಟ್ರಿಷಿ ಯನ್‌ಗಳು ದುರಸ್ತಿಪಡಿಸುತ್ತಿದ್ದಾರೆ. ೨-೩ ದಿನಗಳೊಳಗೆ ಅರ ಮನೆ ಒಳ ಆವರಣದಲ್ಲಿ ದಸರಾ ಸಿದ್ಧತಾ ಕಾರ್ಯ ಪೂರ್ಣ ಗೊಳಿಸಲು ಅರಮನೆ ಮಂಡಳಿ ಕ್ರಮ ಕೈಗೊಂಡಿದೆ.

ಅರಮನೆ ಆವರಣದಲ್ಲಿರುವ ಉದ್ಯಾನಗಳಲ್ಲಿ ಕಳೆ ಗಿಡಗಳ ತೆರವು ಕಾರ್ಯ, ಅರಮನೆ ಮುಂಭಾಗದ ಉದ್ಯಾನದಲ್ಲಿ ಹೂವಿನ ಕುಂಡಗಳ ಜೋಡಣೆ ಮಾಡ ಲಾಗುತ್ತಿದೆ. ರಸ್ತೆಗಳಿಗೆ ದೀಪಾಲಂಕಾರ: ನಗರದ ಪ್ರಮುಖ ರಸ್ತೆಗಳಾದ ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಬಿ.ಎನ್.ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಇರ್ವಿನ್ ರಸ್ತೆ ಹಾಗೂ ಹೊರ ವಲಯದ ಪ್ರಮುಖ ಹೆದ್ದಾರಿಗಳಿಗೆ ದೀಪಾಲಂಕಾರ ಮಾಡಿ ನಿತ್ಯ ಟ್ರಯಲ್ ನೋಡಲಾಗುತ್ತಿದೆ. ನಗರದ ಎಲ್‌ಐಸಿ ವೃತ್ತ, ರಾಮ ಸ್ವಾಮಿ ವೃತ್ತ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ದೊಡ್ಡಕೆರೆ ಮೈದಾನ, ಜಯ ಚಾಮರಾಜ ವೃತ್ತ, ಗನ್‌ಹೌಸ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದೆ. ಈ ಬಾರಿ ೧೩೬ ಕಿ.ಮೀ. ಉದ್ದದ ದೀಪಾಲಂಕಾರ, ೧೧೬ ವೃತ್ತಗಳಲ್ಲಿ ಕಣ್ಮನ ಸೆಳೆಯುವ ಮೂವ್‌ಮೆಂಟ್ ದೀಪ ಗಳನ್ನು ಅಳವಡಿಸಲಾಗಿದೆ.

ಒಂದು ಲಕ್ಷ ಹೂವಿನ ಕುಂಡ: ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಬಾರಿ ೩೫ರಿಂದ ೪೦ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿವೆ. ಉತ್ತನಹಳ್ಳಿಯಲ್ಲಿ ಯುವ ದಸರಾ: ಯುವ ದಸರಾವನ್ನು ಈ ಬಾರಿಯೂ ಉತ್ತನಹಳ್ಳಿ ಸಮೀಪ ಆಯೋಜಿಸುತ್ತಿದ್ದು, ಅರ್ಜುನ್ ಜನ್ಯ, ಸ್ಯಾಂಡಲ್‌ವುಡ್ ನೈಟ್ಸ್ ಖ್ಯಾತ ಸಂಗೀತ ದಿಗ್ಗಜರ ರಸಸಂಜೆ ಕಾರ್ಯಕ್ರಮ ನಿಗದಿ ಯಾಗಿರುವುದರಿಂದ ಯುವಕರು ಕಾತರದಿಂದ ಕಾದಿದ್ದರೆ, ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ.

೯೪೮.೬೫ ಲಕ್ಷ ರೂ. ವೆಚ್ಚದ ಕಾಮಗಾರಿಗಳ ವಿವರ: 

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಮಹಾನಗರಪಾಲಿಕೆ ವತಿಯಿಂದ ಒಟ್ಟು ೯೪೮.೬೫ ಲಕ್ಷ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ದಸರಾ ಜಂಬೂಸವಾರಿ ಸಾಗುವ ಮಾರ್ಗ, ಅರಮನೆ ಸುತ್ತಲೂ ಹಾಗೂ ಇತರೆ ಕಡೆಗಳಲ್ಲಿ ೧೧೪.೬೬ ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡಿಂಗ್ ಕಾಮಗಾರಿ

೫೮೮.೭೦ ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗದ ದುರಸ್ತಿ, ನಗರದ ಪ್ರಮುಖ ರಸ್ತೆಗಳಲ್ಲಿ ಲೇನ್, ಕರ್ಬ್ ಪೇಂಟಿಂಗ್ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿ  ೧೪.೭೫ ಲಕ್ಷ ರೂ. ವೆಚ್ಚದಲ್ಲಿ ಒಡೆಯರ್ ಪ್ರತಿಮೆಗಳು, ಅಂಬೇಡ್ಕರ್ ಪ್ರತಿಮೆಗಳು, ವೃತ್ತಗಳಲ್ಲಿ ಗೋಪುರಗಳಿಗೆ ಬಣ್ಣ ಬಳಿಯುವುದು

೯೦ ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸ್ವಚ್ಛತಾ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ನಿರ್ಮಾಣ ಮಾಡುವುದು  ೮೮.೦೪ ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಕಾಮಗಾರಿ, ೨೦ ಕ್ಕೂ ಮೇಲ್ಪಟ್ಟ ಉದ್ಯಾನವನಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡುವುದು

೧೫ ಲಕ್ಷ ರೂ. ವೆಚ್ಚದಲ್ಲಿ ಶ್ವಾನ ಪ್ರದರ್ಶನ, ೧೨.೫೦ ಲಕ್ಷ ರೂ. ವೆಚ್ಚದಲ್ಲಿ ಯುವಸಂಭ್ರಮ ಹಾಗೂ ೨೫ ಲಕ್ಷ ರೂ.ಗಳನ್ನು ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳ ನಿರ್ಮಾಣ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ.

” ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಆನ್ ಲೈನ್‌ನಲ್ಲಿ ಗೋಲ್ಡ್ ಕಾರ್ಡ್, ಟಿಕೆಟ್‌ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಯುವ ಸಂಭ್ರಮವನ್ನು ಪ್ರತಿನಿತ್ಯ ೫೦ ಸಾವಿರ ಜನರು ವೀಕ್ಷಿಸುತ್ತಿದ್ದಾರೆ ಎಂಬ ಮಾಹಿತಿದೊರೆತಿದೆ. ಗಣ್ಯರನ್ನು ಆಹ್ವಾನಿಸುವ ಕೆಲಸ ಮುಗಿದಿದೆ. ವೈಮಾನಿಕ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ಈ ಬಾರಿ ಮತ್ತಷ್ಟು ರಂಗು ಬಂದಿದೆ.”

-ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

” ದಸರಾ ಮಹೋತ್ಸವದ ಸಂಬಂಧ ನಗರದ ರಸ್ತೆಗಳ ಗುಂಡಿ ದುರಸ್ತಿಪಡಿಸಲಾಗಿದೆ. ರಾಜ ಮಾರ್ಗದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ. ಫುಟ್‌ಪಾತ್ ನಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ನವರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕಾಗಿ ಹೆಚ್ಚುವರಿ ಪೌರಕಾರ್ಮಿಕರು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.”

-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರಪಾಲಿಕೆ

” ಮೈಸೂರಿನ ಹಸಿರು ಚಪ್ಪರ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿವಿಧ ಮಾದರಿಯ ಆಕೃತಿಗಳನ್ನು ಅಳವಡಿಸುವ ಕಾರ್ಯ, ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ಡ್ರೋನ್ ಮೂಲಕ ಮೈಸೂರನ್ನು ಸಂಭ್ರಮಿಸುವುದಕ್ಕೆ ತಯಾರಿ ಮಾಡಿಕೊಂಡಿದೆ. ಈ ವರ್ಷ ಮೂರು ಸಾವಿರ ಡ್ರೋನ್‌ಗಳ ಹಾರಾಟ ವೀಕ್ಷಣೆ ಮಾಡುವ ಅವಕಾಶ ಇರುವುದರಿಂದ ದೀಪಾಲಂಕಾರಕ್ಕೆ ಮೆರುಗು ಬರಲಿದೆ.”

-ಕೆ.ಎಂ.ಮುನಿಗೋಪಾಲರಾಜು, ಸೆಸ್ಕ್ ಎಂಡಿ

Tags:
error: Content is protected !!