Mysore
22
overcast clouds

Social Media

ಗುರುವಾರ, 18 ಜೂನ್ 2026
Light
Dark

ಕುತೂಹಲ ಮೂಡಿಸಿದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ

ಮಂಜು ಕೋಟೆ

ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ; ಮುಖಂಡರಿಗೆ ಪ್ರತಿ

ಎಚ್.ಡಿ.ಕೋಟೆ: ಕ್ಷೇತ್ರದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ನಿಗದಿಯಾಗುತ್ತಿದ್ದಂತೆ ಎ ತರಗತಿ ಮತ್ತು ಬಿ ತರಗತಿಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ ಎದುರಾಗಿದ್ದು, ಮೂರೂ ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಕಳೆದ ಸಾಲಿನ ಆಡಳಿತ ಮಂಡಳಿ ಅವಧಿ ನವೆಂಬರ್‌ಗೆ ಪೂರ್ಣಗೊಂಡಿದ್ದು, ಇಲ್ಲಿಯವರೆಗೂ ಆಡಳಿತ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದರು. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯನ್ನು ಸರ್ಕಾರ ಜುಲೈ ೨೬ರಂದು ನಡೆಸಲು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ೧೨ ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಲು ಮೂರೂ ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

ಈಗಾಗಲೇ ಚುನಾವಣೆಗಳನ್ನು ಗೆಲ್ಲಲೇಬೇಕೆಂದು ಪ್ರತಿಷ್ಠೆಯಾಗಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಅನಿಲ್ ಚಿಕ್ಕಮಾದು, ಏಜಾಜ್ ಪಾಷಾ, ಮಾದಪ್ಪ, ನಾಗನಹಳ್ಳಿ ಪ್ರದೀಪ, ಶಿವಮಲ್ಲಪ್ಪ, ಹಿರೇಹಳ್ಳಿ ಸೋಮೇಶ್, ಈರೇಗೌಡ, ನರಸೀಪುರರವಿ, ಪರಶಿವ, ಜಿನ್ನಳ್ಳಿ ರಾಜನಾಯಕ, ಭಾಸ್ಕರ್, ಸತೀಶ್ ಗೌಡ, ಗುರುಸ್ವಾಮಿ, ಜಾ.ದಳದಿಂದ ಕೆ.ಎಂ.ಕೃಷ್ಣನಾಯಕ, ಕೆ.ಎಸ್.ಗೌಡ, ಗುಂಡತ್ತೂರು ಪ್ರಕಾಶ, ಮಹೇಶ, ಕರವೇ ನಟರಾಜ್, ಬೆಳಗನಹಳ್ಳಿ ಶಿವರಾಜ್, ಪ್ರಕಾಶ, ಬಿಜೆಪಿಯಿಂದ ಮೊತ್ತ ಬಸವರಾಜಪ್ಪ, ಟಿ.ವೆಂಕಟೇಶ್, ಶಂಭುಗೌಡ, ಗುರು ಸ್ವಾಮಿ, ಬಸವರಾಜು, ಅಭಿಷೇಕ್, ರಾಜಣ್ಣ, ಗಣಪತಿ, ನಟರಾಜ್, ವೃಷ ಭೇಂದ್ರ ಮುಂತಾದವರು ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಈಗಾಗಲೇ ಎ ತರಗತಿಯಿಂದ ೪ ನಿರ್ದೇಶಕರ ಸ್ಥಾನಗಳಲ್ಲಿ ಸ್ಪಽಸಲು ಮತ್ತು ಮತ ಚಲಾಯಿಸಲು ಕೋಟೆ ಮತ್ತು ಸರಗೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ೨೨ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೆಲಿಗೇಟ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ೧೬ರಂದು ಪೂರ್ಣಗೊಂಡಿದ್ದು, ಚಿಕ್ಕೆರೆಯೂರಿನ ಸಹಕಾರ ಸಂಘದಿಂದ ಶಿವಶಂಕರ್, ಅಂತರಸಂತೆ ಸಹಕಾರ ಸಂಘದಿಂದ ಗುಂಡತ್ತೂರು ಪ್ರಕಾಶ್, ಹೆಬ್ಬಲಗುಪ್ಪೆ ಸಹಕಾರ ಸಂಘದಿಂದ ಗೋವಿಂದ ಶೆಟ್ಟಿ, ತುಂಬಸೋಗೆ ಸಂಘದಿಂದ ಸಣ್ಣ ನಾಯಕ, ಸರಗೂರು ಸಹಕಾರ ಸಂಘದಿಂದ ಶಿವಶಂಕರನ್, ಕಿತ್ತೂರು ಸಹಕಾರ ಸಂಘದಿಂದ ವೆಂಕಟಮ್ಮ, ಬಿ.ಮಟಕೆರೆ ಸಹಕಾರ ಸಂಘದಿಂದ ಭಾಗ್ಯ, ಕೆ.ಬೆಳತ್ತೂರು ಸಂಘದಿಂದ ಮಹದೇವಪ್ಪ, ಹಂಚಿಪುರ ಸಹಕಾರ ಸಂಘದಿಂದ ದೇವರಾಜಪ್ಪ, ಮೇಟಿಕುಪ್ಪೆ ಸಂಘದಿಂದ ಮಾದಪ್ಪ, ಮನಗನಹಳ್ಳಿ ಸಂಘದಿಂದ ತಮ್ಮಯ್ಯಪ್ಪ, ನಾಗನಹಳ್ಳಿ ಸಹಕಾರ ಸಂಘದಿಂದ ಹಿರೇಹಳ್ಳಿ ಸೋಮೇಶ್, ಹಾಲನಹಳ್ಳಿ ಸಂಘದಿಂದ ರಾಜೇಗೌಡ, ಮಾದಾಪುರಸಂಘದಿಂದ ಎಂ.ಡಿ.ಮಂಚಯ್ಯ, ಕೋಟೆ ಸಹಕಾರ ಸಂಘದಿಂದ ಪ್ರೇಮ, ಸಾಗರೆ ಸಂಘ ದಿಂದ ಸಕಲೇಶ್, ಕ್ಯಾತನಹಳ್ಳಿ ಸಂಘದಿಂದ ಗೋವಿಂದರಾಜು, ಜಿನ್ನಳ್ಳಿ ಸಂಘ ದಿಂದ ಜಿನ್ನಳ್ಳಿ ರಾಜನಾಯಕ, ಅಣ್ಣೂರು ಸಂಘದಿಂದ ಎಡತೊರೆ ಮಹೇಶ್, ಎಚ್.ಮಟಕೆರೆ ಸಹಕಾರ ಸಂಘದಿಂದ ವಕೀಲ ರವಿಕುಮಾರ್, ಕಂಚಮಳ್ಳಿ ಸಂಘದಿಂದ ಶಿವನಂಜಮ್ಮ ಮತ್ತುಕೋಟೆ ಲ್ಯಾಂಪ್ಸ್ ಸಹಕಾರ ಸಂಘದಿಂದದೇವರಾಜು ಅವರುಗಳನ್ನು ಪೈಪೋಟಿಯ ಮೂಲಕ ಮೂರೂ ಪಕ್ಷದವರುಆಯ್ಕೆ ಮಾಡಿಕೊಂಡಿದ್ದಾರೆ.

ಬಿ ತರಗತಿಯ ೮ ಸ್ಥಾನಗಳಿಗೆ ನಡೆಯ ಲಿರುವ ಚುನಾವಣೆಗಳಿಗೆ ೧,೯೦೦ ಮತದಾರಗಳ ಪೈಕಿ ಕಾಂಗ್ರೆಸ್, ಜಾ.ದಳ, ಬಿಜೆಪಿಯಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕಾಂಗ್ರೆಸ್ ಪಕ್ಷದವರಿಗೆ ಪೈಪೋಟಿ ನೀಡಲು ಜಾ.ದಳ ಮತ್ತು ಬಿಜೆಪಿ ಪಕ್ಷದವರು ಒಗ್ಗಟ್ಟಾಗಿದ್ದಾರೆ. ಮುಂದಿನ ತಿಂಗಳು ಯಾವ್ಯಾವ ಅಭ್ಯರ್ಥಿಗಳು ಯಾವ ಸ್ಥಾನಗಳಿಗೆ ನಿಲ್ಲುತ್ತಾರೆ, ಯಾರ ಪರವಾಗಿ ಯಾವ ಮುಖಂಡರು ಕೆಲಸ ನಿರ್ವಹಿಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

” ಎ ತರಗತಿಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೨ ಡೆಲಿಕೇಟ್ಗಳ ಹೆಸರುಗಳನ್ನು ಸಂಘದವರು ನೀಡಿದ್ದಾರೆ. ಚುನಾವಣಾಧಿಕಾರಿ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ.”

-ನಿಂಗರಾಜು, ಸಿಇಒ, ಟಿಎಪಿಸಿಎಂಎಸ್,

 

 

Tags:
error: Content is protected !!