ಚಂದ್ರಶೇಖರಮೂರ್ತಿ
ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಜೀವಕ್ಕೆ ನ್ಯಾಯವೆಲ್ಲಿ?
ನಮ್ಮ ಶಿಕ್ಷಣ ಪಡೆಯೋಕೆ ಒದೆ ತಿನ್ನೋ ಪರಿಸ್ಥಿತಿ: ವಿದ್ಯಾರ್ಥಿಗಳ ಆಕ್ರೋಶದ ನುಡಿ
ವೈದ್ಯರಾಗುವ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ; ಪ್ರತಿಭಟಿಸಿದ ಕಾರಣಕ್ಕೆ ಲಾಠಿ ಏಟು
ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ವಿದ್ಯಾರ್ಥಿ ಯುವ ಸಮೂಹ ಪ್ರತಿಭಟನೆ ನಡೆಸುತ್ತಿದೆ.
ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಕಳೆದೊಂದು ತಿಂಗಳಿನಿಂದ ದೆಹಲಿಯ ಜಂತರ್ ಮಂಥರ್‌ನಲ್ಲಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಸುದೀರ್ಘ ಉಪವಾಸ ಸತ್ಯಾಗ್ರಹ ಮಾಡುತ್ತಿzರೆ. ಸೋಮವಾರ ಕಾಕ್ರೋಚ್ ಜನತಾ ಪಾರ್ಟಿ ಸಂಸತ್ ಚಲೋ ಹೋರಾಟಕ್ಕೆ ಕರೆ ನೀಡಿದ್ದರಿಂದ ದೇಶದ ನಾನಾ ಭಾಗಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರ ಯುವ ಸಮೂಹ ಸಂಸತ್ ಭವನದ ಮುಂದೆ ಅಪಾರ ಸಂಖ್ಯೆಯಲ್ಲಿ ಸೇರಿತ್ತು. ಈ ವೇಳೆ ನಡೆದ ಲಾಠಿ ಚಾರ್ಜ್‌ಗೆ ಸರ್ಕಾರದ ವಿದ್ಯಾರ್ಥಿ ಸಮೂಹ ಆಕ್ರೋಶ ಹೊರ ಹಾಕಿದೆ.
ಜನರ ಜೀವದ ಜೊತೆ ಆಟ ಆಡುತ್ತಿದ್ದಾರೆ:
ಈ ಬಿಜೆಪಿ ಸರ್ಕಾರದ ವರ್ತನೆ ಅತಿರೇಕವಾದುದಾಗಿದೆ. ನಮ್ಮ ಶಿಕ್ಷಣ ನಾವು ಪಡೆದುಕೊಳ್ಳುವುದಕ್ಕೆ ಇವರ ಹತ್ತಿರ ಒದೆ ತಿನ್ನುವಂತಹ ಪರಿಸ್ಥಿತಿ ಬಂದಿದೆ. ಸೋನಂ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸಹ ಅದು ಶಾಂತಿಯುತವಾಗಿಯೇ ಇತ್ತು. ಲಾಠಿ ಚಾರ್ಜ್ ಮಾಡುವ ಅಗತ್ಯ ಇರಲಿಲ್ಲ. ನಾವೇ ಅವರನ್ನು ವೋಟ್ ಮಾಡಿ ಗೆಲ್ಲಿಸಿದ ಮೇಲೆ ಜನರ ಸೇವೆ ಮಾಡುವುದಕ್ಕೆ ಆಗಲ್ಲ ಅಂದ ಮೇಲೆ ಅವರು ಏಕೆ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇರಬೇಕು. ಅವರು ಈ ಅಧಿಕಾರವನ್ನು ಏಕೆ ತೆಗೆದುಕೊಂಡರು. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಎಷ್ಟು ಜನರ ಜೀವದ ಜೊತೆ ಅವರು ಆಟ ಆಡುತ್ತಿದ್ದಾರೆ ಎಂಬುದು ಅವರಿಗೆ ಮನವರಿಕೆ ಆಗುತ್ತಿದ್ಯಾ ಇಲ್ವಾ. ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ಕೊಡಬೇಕು.
ಚಂದನ, ಕಾನೂನು ವಿದ್ಯಾರ್ಥಿನಿ
ಹೊಡೆದು ಹಿಂಸೆ ಕೊಡುವುದು ಎಷ್ಟು ಸರಿ?:
ನೀಟ್ ಪರೀಕ್ಷೆಯಲ್ಲಿ ಅಕ್ರಮ ಆಗಿದೆ. ಅದನ್ನು ಖಂಡಿಸಿ ಸಂಬಂಧಪಟ್ಟ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಇವರು ಹಿಂಸಾಚಾರ ಮಾಡುವಂತಹದ್ದು ಏನಿದೆ. ಅವರು ವೈಯಕ್ತಿಕವಾಗಿ ಏನನ್ನೂ ಮಾಡುತ್ತಿಲ್ಲ. ನಾಳೆಯ ಭವಿಷ್ಯಕ್ಕೋಸ್ಕರ, ಹಕ್ಕುಗಳಿಗೋಸ್ಕರ ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಮುಂದೆ ಯಾವುದೇ ಅಕ್ರಮಗಳು ಆಗಬಾರದು ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕು ಎಂದು ಅವರ ಪಾಡಿಗೆ ಅವರು ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಇವರು ಅವರನ್ನು ಬಲವಂತವಾಗಿ ಹೊಡೆದು ಹಿಂಸೆ ಕೊಟ್ಟು ಹೀಗೆ ಮಾಡುವುದು ಎಷ್ಟು ಸರಿ. ನಮ್ಮದು ಪ್ರಜಪ್ರಭುತ್ವ ದೇಶ. ಆದರೆ, ಇವರು ಸರ್ವಾಧಿಕಾರದ ಅಧಿಕಾರ ನಡೆಸುತ್ತಿದ್ದಾರೆ. ಕೂಡಲೇ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕು.
ಡಾ.ನಟರಾಜ್ ಶಿವಣ್ಣ, ಸಿಂಡಿಕೇಟ್ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯ
ಪಂಚೇಂದ್ರಿಯಗಳೇ ಇಲ್ಲದ ಮೋದಿ ಸರ್ಕಾರ:
ಪಂಚೇಂದ್ರಿಯಗಳೇ ಇಲ್ಲದಿರುವ ಈ ನರೇಂದ್ರ ಮೋದಿ ಸರ್ಕಾರಕ್ಕೆ ಏನು ಹೇಳಬೇಕೂ ಗೊತ್ತಾಗುತ್ತಿಲ್ಲ. ಅಲ್ಲಿ ವಿದ್ಯಾರ್ಥಿಗಳು ಏನು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರೋ ಅದನ್ನು ಬಲಿ ಪಡೆಯುವ ಕೆಲಸವನ್ನು ಮಾಡಿದ್ದಾರೆ. ಆ ವಿದ್ಯಾರ್ಥಿಗಳ ಮೇಲೆ ಮಾಡುತ್ತಿರುವ ಲಾಠಿ ಚಾರ್ಜ್‌ಗಳನ್ನು ಕಣ್ಣಿಂದ ನೋಡುವುದಕ್ಕೆ ಆಗುತ್ತಿಲ್ಲ. ಏಕೆ ಈ ಕೃತ್ಯ ಎಸಗುತ್ತಿzರೆ ಮೋದಿ ಎಂದು ತಿಳಿಯುತ್ತಿಲ್ಲ. ದೇಶದಲ್ಲಿ ಆಗುತ್ತಿರುವ ಅನ್ಯಾಯವನ್ನು ಮೊದಲು ತಡೆಯಬೇಕು. ನೀಟ್ ಪರೀಕ್ಷೆಯೇ ಬೇಡ ಎಂದು ಹೋರಾಟ ಮಾಡುತ್ತಿರುವವರನ್ನು ನೀವು ದನ ಬಡಿಯುವ ಹಾಗೆ ಬಡಿಯುತ್ತೀರಾ. ಪೊಲೀಸ್ ಇಲಾಖೆಯವರು ಸೌಜನ್ಯದಿಂದ ವರ್ತಿಸಬೇಕು. ಖಾಕಿ ಬಟ್ಟೆ ಧರಿಸಿದ ಕೂಡಲೇ ಮನಬಂದಂತೆ ವರ್ತಿಸುವುದು ಸರಿಯಲ್ಲ.
ಕಲ್ಲಳ್ಳಿ ಕುಮಾರ್, ಸಂಶೋಧನಾ ವಿದ್ಯಾರ್ಥಿ
ತಪ್ಪು ಮಾಡಿದ ಮೇಲೆ ರಾಜೀನಾಮೆ ಕೊಡಲೇಬೇಕು:
ವಿದ್ಯಾರ್ಥಿಗಳ ಪರವಾಗಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ನಮಗೆ ಗೊತ್ತಿದೆ. ವಿದ್ಯಾರ್ಥಿಗಳ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಅದಕ್ಕೆ ಇವರು ಲಾಠಿ ಚಾರ್ಜ್ ಮಾಡುವ ಅಗತ್ಯ ಇರಲಿಲ್ಲ. ಯಾರೇ ಆದರೂ ತಪ್ಪು ಮಾಡಿದ ಮೇಲೆ ರಾಜೀನಾಮೆ ಕೊಡಲೇಬೇಕು. ವಿದ್ಯಾರ್ಥಿಗಳ ಪರವಾಗಿ ನಿಂತು ನ್ಯಾಯ ಒದಗಿಸಬೇಕು. ಅಧಿಕಾರ ಮುಖ್ಯವಲ್ಲ, ಅವರು ಅಧೀಕಾರಕ್ಕೆ ಬಂದಿರುವುದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕೆ. ಅದನ್ನು ಬಿಟ್ಟು ಹೀಗೆಲ್ಲ ಮಾಡೋದು ಸರಿಯಲ್ಲ. ಭವಿಷ್ಯದ ಶಿಕ್ಷಣ ಸರಿ ಆಗಬೇಕು ಎಂದರೆ ಇಂತಹವರು ಅಧಿಕಾರ ಬಿಟ್ಟು ಒಳ್ಳೆ ರಾಜಕಾರಣಿಗಳು ಬರಬೇಕು.
ಸೌಂದರ್ಯ ಎನ್, ವಿದ್ಯಾರ್ಥಿನಿ
ಕೇಂದ್ರ ಸರ್ಕಾರ ಸರ್ವಾಧಿಕಾರದಿಂದ ನಡೆದುಕೊಳ್ಳುತ್ತಿದೆ: ಸಂಸತ್ ಭವನದ ಮುಂದೆ ನಡೆದ ಘಟನೆಗಳನ್ನೆ ನೋಡಿದರೆ ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಸರ್ವಾಧಿಕಾರದಿಂದ ನಡೆದುಕೊಳ್ಳುತ್ತಿದೆ ಎಂದು ತಿಳಿಯಬಹುದು. ನೀಟ್ ಪರೀಕ್ಷೆ ಹಗರಣ ನಡೆದು ೨೦ ಮಕ್ಕಳು ತಮ್ಮ ಪ್ರಾಣ ಬಿಟ್ಟರು. ಆದರೂ ಅವರು ಇದ್ಯಾವುದಕ್ಕೂ ಚಿಂತಿಸುತ್ತಿಲ್ಲ. ಸೋನಮ್ ವಾಂಗ್ಚುಕ್ ಅವರು ಈ ಮಕ್ಕಳ ಪರವಾಗಿ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದರು. ಅವರನ್ನೂ ಸಹ ಬಲವಂತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಈಗ ಇವರು ವಿದ್ಯಾರ್ಥಿಗಳ ಮೇಲೆ ಹ ಮಾಡಿಸಿರುವುದು ಎಷ್ಟರ ಮಟ್ಟಿಗೆ ಸರಿ. ಲಾಠಿ ಚಾರ್ಜ್ ಮಾಡಿ ಅಮಾನವೀಯ ಕೃತ್ಯ ಎಸಗಿzರೆ. ಇದನ್ನು ತನಿಖೆ ಮಾಡಿಸಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದೊಂದು ಕೋಟಿ ರೂ. ಕೊಟ್ಟು ಅವರ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಲೇಬೇಕು.
ರೋಹನ್, ವಿದ್ಯಾರ್ಥಿ





