ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟ ಬಡಿಸಲು ನಾಲ್ಕು ವಲಯವಾರು ೨ ಕೋಟಿ ರೂ. ಟೆಂಡರ್ ಕರೆದಿರುವುದು ಹಾಸ್ಯಾಸ್ಪದವಾಗಿದೆ,
ರಾಜ್ಯದಲ್ಲಿ ಎಷ್ಟೋ ಜನರು ಒಂದು ಹೊತ್ತಿನ ಊಟಕ್ಕಾಗಿ ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ, ಜನರಿಗೆ ಊಟ ಇಲ್ಲದಿದ್ದರೂ ಬೀದಿ ನಾಯಿಗಳಿಗೆ ಬಿರಿಯಾನಿ ಬಡಿಸಲು ಹೊರಟಿರುವ ಬಿಬಿಎಂಪಿ ಅಧಿಕಾರಿಗಳ ನಿಲುವು ಖಂಡನೀಯ. ಬೀದಿನಾಯಿಗಳಿಗೆ ಬಿರಿಯಾನಿ ಹಾಕುವ ಯೋಜನೆಯನ್ನು ಕೈಬಿಟ್ಟು ಹಸಿದವರ ಹೊಟ್ಟೆ ತುಂಬಿಸಲು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
–ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ.





