Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಶೆಟ್ಟಿಹಳ್ಳಿ : ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿ ಕಳಪೆ

84 ಲಕ್ಷ ರೂ. ವೆಚ್ಚದ ಕಾಮಗಾರಿಯಲ್ಲಿ ಸಿಮೆಂಟ್‌ಗಿಂತ ಎಂ ಸ್ಯಾಂಡ್‌ ಹೆಚ್ಚು ಬಳಕೆ: ಆರೋಪ
ಮಾಮರಶಿ

ಮಳವಳ್ಳಿ: ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಿಂದ ಪಟ್ಟಣದ ಎಸ್‌ಸಿ, ಎಸ್‌ಟಿ ಬಾಲಕರ ಹಾಸ್ಟೆಲ್‌ನವರೆಗೆ ೮೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಮತ್ತು ಚರಂಡಿ ಕಾಮಗಾರಿ ಸಂಬಂಧ ಶಾಸಕರಾದ ಪಿ. ಎಂ. ನರೇಂದ್ರಸ್ವಾಮಿ ಅವರು ಹೆಚ್ಚಿನ ಕಾಳಜಿ ವಹಿಸಿ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲು ಹಂಚಿಕೆಯಾದ ಅನುದಾನದಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ತಡವಾದರೂ ನಂತರ ಬಿರುಸಿನಿಂದ ಸಾಗಿರುವ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಾವಿರಾರು ಜನರ ಸಂಚಾರ:ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು, ಶಾಲಾ ಕಾಲೇಜು ಮಕ್ಕಳು ಸಂಚರಿಸುತ್ತಾರೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅಳವಡಿಸಿಕೊಂಡು ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡಬೇಕಿದೆ.

ಸಿಮೆಂಟ್ ರಸ್ತೆ ಕಾಮಗಾರಿ ಎಂ ಸ್ಯಾಂಡ್‌ಮಯ! : ಈ ರಸ್ತೆ ಸಿಮೆಂಟ್ ರಸ್ತೆಯಾಗಿದ್ದು ಎಲ್ಲವೂ ಎಂ. ಸ್ಯಾಂಡ್ ಮಯವಾಗಿದೆ, ಇದರಲ್ಲಿ ಎಷ್ಟು ಸಿಮೆಂಟ್ ಮಿಶ್ರಣವಾಗಿದೆ ಎಂಬುದು ತಿಳಿದಿಲ್ಲ. ಸೇತುವೆ ಕಾಮಗಾರಿಯಲ್ಲೂ ಬರಿ ಎಂ. ಸ್ಯಾಂಡ್ ಹೆಚ್ಚಾಗಿ ಬಳಸಿ ರುವುದರಿಂದ ಎಲ್ಲವೂ ಎಂ ಸ್ಯಾಂಡ್‌ಮಯ ಎನ್ನಬಹುದು.

ಗುಣಮಟ್ಟದ ಕಾಮಗಾರಿ ಮಾಡಲು ಒತ್ತಾಯ: ದಿನನಿತ್ಯ ಸಾವಿರಾರು ಜನರು, ಶಾಲಾ ಕಾಲೇಜು ಮಕ್ಕಳು, ವಾಹನಗಳ ಸಂಚರಿಸುವುದರಿಂದ ಈ ರಸ್ತೆ ಗುಟ್ಟಮಟ್ಟದ ಕಾಮಗಾರಿ ಆಗಬೇಕು, ಸುರಕ್ಷತೆ ನಿಯಮಗಳನ್ನು ಅಳವಡಿಸಿಕೊಂಡು ಶಾಶ್ವತ ಗುಣಮಟ್ಟದಿಂದ ಕಾಮಗಾರಿ ನಡೆಸುಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸೇತುವೆ ಅಗಲೀಕರಣಕ್ಕೆ ಸಮಾಜ ಸೇವಕರ ನೆರವು: ೮೪ ಲಕ್ಷ ಯೋಜನಾ ವೆಚ್ಚದ ಕಾಂಕ್ರಿಟ್ ರಸ್ತೆಗೆ ಅಡ್ಡಲಾಗಿ ಹೋಗಿರುವ ಹಳೆಯ ಸೇತುವೆ ವಿಸ್ತರಿಸಲು ಸಮಾಜ ಸೇವಕ ರಾಮಕೃಷ್ಣ ಅವರು ಸ್ವತಃ ೩ ಲಕ್ಷ ಹಣ ನೀಡಿ ಸೇತುವೆ ಅಗಲೀಕರಣಕ್ಕೆ ಮುಂದಾಗಿದ್ದಾರೆ.

೮೪ ಲಕ್ಷ ರೂ. ಯೋಜನಾ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆಯ ಮಧ್ಯೆ ಅಡ್ಡಲಾಗಿರುವ ಸೇತುವೆ ವಿಸ್ತರಣೆಗೆ ಸ್ಥಳೀಯ ಸಮಾಜ ಸೇವಕ ರಾಮಕೃಷ್ಣ ಅವರು ನೆರವು ನೀಡಿದ್ದಾರೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿದ್ದಾರೆ. -ಎಸ್. ಕೆ. ಮನೋಹರ್ ಅರಸ್, ಉಪಾಧ್ಯಕ್ಷರು, ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ.

ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಬಳಸುತ್ತಿರುವ ಸಿಮೆಂಟ್ ಕಳಪೆಯಾಗಿದೆ. ಈ ಬಗ್ಗೆ ಈ ರಸ್ತೆಯ ಯೋಜನಾ ವೆಚ್ಚದ ವಿವರವನ್ನು ಕೇಳಿದರೂ ಈವರೆಗೂ ನೀಡಿಲ್ಲ. ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆ ನಡೆಸುತ್ತೇನೆ. –ಶಂಕರ ಮೂರ್ತಿ, ಸಮಾಜ ಸೇವಕರು, ಶೆಟ್ಟಹಳ್ಳಿ.

 

Tags:
error: Content is protected !!