ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೆ ಬಿ.ಸಿ ಟ್ರಸ್ಟಿನಿಂದ ರೈತರಿಗೆ ಅನುಕೂಲ
ಕೃಷ್ಣ ಸಿದ್ದಾಪುರ
ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ಭತ್ತ ಕೃಷಿಗೆ ಪುನಶ್ಚೇತನ ನೀಡಲು ವಿರಾಜಪೇಟೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ ಯಂತ್ರಶ್ರೀ ಯೋಜನೆಯ ಯಾಂತ್ರೀಕೃತ ಭತ್ತದ ನಾಟಿ ಮಾಡಿ ರೈತರು ಯಶಸ್ಸು ಸಾಧಿಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಯಂತ್ರಶ್ರೀ ಯೋಜನೆಯಡಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಯಾಂತ್ರೀಕೃತ ಮಾದರಿಯನ್ನು ಅಳವಡಿಸಿ ಭತ್ತದ ಪೈರಿನ ನಾಟಿಯನ್ನು ಮಾಡಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು ೨ ಸಾವಿರ ಎಕರೆಯಲ್ಲಿ ಬೆಳೆಯಲಾಗಿರುವ ಭತ್ತದ ಫಸಲು ಇದಿಗ ಅಧಿಕ ಇಳುವರಿಯೊಂದಿಗೆ ಕಟಾವಿಗೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಯಾಂತ್ರೀಕೃತ ಭತ್ತ ಬೇಸಾಯ ಪದ್ಧತಿಯಲ್ಲಿ ವೈಜ್ಞಾನಿಕವಾಗಿ ಭತ್ತದ ಸಸಿಯನ್ನು ೧ ಅಡಿ ಅಗಲ ೨ ಉದ್ದದ -ಬರ್ ಟ್ರೇನಲ್ಲಿ ಸಸಿಯನ್ನು ಸಸಿ ಮಡಿಗಳನ್ನು ಬೆಳೆಸಲಾಗುತ್ತದೆ. ಸಸಿ ಮಡಿ ಮಾಡಲು ೧ ಎಕರೆ ಭತ್ತದ ನಾಟಿಗೆ ೮೦ ರಿಂದ ೧೦೦ ಟ್ರೇ ಬೇಕಾಗುತ್ತದೆ. ೧೫ ಬುಟ್ಟಿ ಜರಡಿ ಹಿಡಿದ ಕೆಂಪು ಗೋಡು ಮಿಶ್ರಿತ ಮಣ್ಣು ೧೫ ರಿಂದ ೨೦ ಕೆಜಿ ಬಿತ್ತನೆ ಬೀಜದ ಅಗತ್ಯವಿದ್ದು, ಈ ವಿಧಾನವನ್ನು ಅಳವಡಿಸಿ ಸಸಿಯನ್ನು ಬೆಳೆಯ ಬೇಕು ಇದರಿಂದ ೧೫ ರಿಂದ ೨೦ ದಿನಗಳ ಒಳಗೆ ಸಸಿಯ ಬೇರುಗಳು ಒಂದಕ್ಕೊಂದು ಸುತ್ತಿ ಕೊಂಡು ಚಾಪೆ ರೀತಿಯಲ್ಲಿ ತಯಾರಾಗುತ್ತದೆ. ಟ್ರೇಯಿಂದ ವೃತ್ತಕಾರದಲ್ಲಿ ಮೇಲೆತ್ತಿದಾಗ ಬೇರ್ಪಟ್ಟು ಬರುತ್ತದೆ. ಸಸಿ ಮಡಿಯನ್ನು ನಾಟಿ ಯಂತ್ರಕ್ಕೆ ನೇರವಾಗಿ ನೀಡುವುದರಿಂದ ಅಗೆ ಕೀಳುವ ಕೆಲಸ ಉಳಿತಾಯವಾಗುತ್ತದೆ. ಹೀಗೆ ಸಿದ್ಧಪಡಿಸಿದ ಸಸಿಮಡಿಯನ್ನು ನಾಟಿಯಂತ್ರದ ಮೂಲಕ ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಸಮಾನ ಅಂತರದಲ್ಲಿ ಸಮಾನ ಪ್ರಮಾಣದಲ್ಲಿ ಎಕರೆಗೆ ಒಂದು ಗಂಟೆ ಅವಽಯಲ್ಲಿ ನಾಟಿ ಮಾಡುವ ಈ ಯಂತ್ರವು ಕಾರ್ಮಿಕರ ಅಭಾವವನ್ನು ನೀಗಿಸಿದೆ. ನಾಟಿ ಮಾತ್ರವಲ್ಲದೆ, ಕಟಾವು ಮಾಡಲು, ಹುಲ್ಲು ಕಟ್ಟಲು ಪ್ರತ್ಯೇಕ ಯಂತ್ರವಿದ್ದು, ರೈತರು ನಿಶ್ಚಿಂತೆಯಿಂದ ಭತ್ತ ಬೆಳೆಯಬಹುದಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಂತ್ರ ಶ್ರೀ ಯೋಜನೆಯಡಿ ರೈತರ ಕೃಷಿಗೆ ಬೇಕಾದ ಉಳುಮೆ, ನಾಟಿ, ಬೆಳೆ ಕಟಾವು, ಹುಲ್ಲು ಕಟ್ಟುವುದು ಸೇರಿದಂತೆ ಫಸಲನ್ನು ಸಂಸ್ಕರಿಸಿ ಮನೆಗೆ ತಲುಪಿಸುವವರೆಗಿನ ಸಂಪೂರ್ಣ ಕೆಲಸವನ್ನು ನಿಭಾಯಿಸುವ ಯಂತ್ರಗಳ ಭತ್ತ ಬ್ಯಾಂಕ್ ಅನ್ನು ಅಮ್ಮತ್ತಿಯಲ್ಲಿ ತೆರೆಯಲಾಗಿದೆ. ಮುಂದಿನ ವರ್ಷದಲ್ಲಿ ಯಂತ್ರ ಶ್ರೀ ಯೋಜನೆಯಡಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು ೫ ಸಾವಿರ ಎಕರೆ ಭತ್ತದ ಕೃಷಿ ಮಾಡಿಸುವ ಗುರಿಯನ್ನು ಇಟ್ಟುಕೊಂಡು ಈಗಿನಿಂದಲೇ ರೈತ ಸಂಘದ ಮೂಲಕ ರೈತರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡುವ ಕಾರ್ಯವನ್ನು ಸಂಸ್ಥೆ ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೮೧೫೦೦೬೪೯೯೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ. ಟ್ರಸ್ಟ್‌ನಿಂದ ರೈತರಿಗೆ ಅನುಕೂಲ ಕಡಿಮೆ ಖರ್ಚಿನಲ್ಲಿ ಯಾಂತ್ರೀಕೃತ ಕೃಷಿಯಿಂದ ಅಽಕ ಇಳುವರಿ ಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕರ ಕೊರತೆ, ಭತ್ತಕ್ಕೆ ಬೆಂಬಲ ಬೆಲೆ ಇಲ್ಲದೆ ಇರುವುದರಿಂದ, ಜಿಲ್ಲೆಯಲ್ಲಿ ಬಹುತೇಕ ಕೃಷಿ ಗದ್ದೆಗಳನ್ನು ಪಾಳು ಬಿಡಲಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಇದರಿಂದ ಲಾಭವಿಲ್ಲದ ಈ ಬೆಳೆಯನ್ನು ರೈತರು ತಮ್ಮ ಸ್ವಂತ ಉಪಯೋಗಕ್ಕೆ ಆಗುವಷ್ಟು ಮಾತ್ರ ಬೆಳೆಸುತ್ತಿದ್ದರು. ಇದೀಗ ಧರ್ಮಸ್ಥಳ ಯಂತ್ರಶ್ರೀ ಯೋಜನೆಯಡಿ ಭತ್ತದ ಕೃಷಿಗೆ ಪೂರಾ ಸ್ಪಂದನೆ ನೀಡುವ ಮೂಲಕ ಸಾವಯವ ಗೊಬ್ಬರದೊಂದಿಗೆ ಯಂತ್ರಶ್ರೀ ಯೋಜನೆಯಡಿ ಯಶಸ್ಸು ಕಾಣಲು ಸಾಧ್ಯವಾಗುತ್ತಿದೆ. ? – ಚೇನಂಡ ಅಜಿತ್ ಪೂಣಚ್ಚ, ಯಾಂತ್ರಿಕೃತ ಭತ್ತ ಬೆಳೆದ ರೈತ, ಕರಡಿಗೋಡು
ಭತ್ತದ ಗದ್ದೆ ಕೆಲಸಕ್ಕೆ ಬೇಕಾದ ಎಲ್ಲಾ ಬಗೆಯ ಯಂತ್ರೋಪ ಕರಣಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯಂತ್ರ ಶ್ರೀ ಯೋಜನೆಯಡಿ ಒದಗಿಸಿಕೊಡಲಾಗುತ್ತಿದ್ದು, ಇದಕ್ಕಾಗಿ ಅಮ್ಮತ್ತಿಯಲ್ಲಿ ಭತ್ತ ಬ್ಯಾಂಕ್ ಕಚೇರಿ ತೆರೆಯಲಾಗಿದೆ. ಯಂತ್ರಗಳ ಸಹಾಯದಿಂದ ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ, ಭತ್ತದ ಕೃಷಿ ಮಾಡಬಹುದಾಗಿದ್ದು, ಅಽಕ ಇಳುವರಿ ಯೊಂದಿಗೆ ಲಾಭ ಗಳಿಸಲು ಸಾಧ್ಯವಿದೆ. ಪ್ರಸಕ್ತ ವರ್ಷ ೨ ಸಾವಿರ ಎಕರೆಯಲ್ಲಿ ಭತ್ತ ಬೆಳೆಸಲಾಗಿ ದ್ದು, ಮುಂದಿನ ವರ್ಷ ೫ ಸಾವಿರ ಎಕರೆ ಗುರಿ ಹೊಂದಲಾಗಿದೆ. -? ಹರೀಶ್, ಜಿಲ್ಲಾ ಕೃಷಿ ಮೇಲ್ವಿಚಾರಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
ಕಾರ್ಮಿಕರಿಂದ ಭತ್ತ ಬೇಸಾಯ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಎಕರೆಗೆ ಸರಿಸುಮಾರು ೧೫ ರಿಂದ ೨೦ ಜನ ಕಾರ್ಮಿಕರ ಅಗತ್ಯವಿದೆ. ಉಳುಮೆ, ಬಿತ್ತನೆ, ಸೇರಿ ೨೫ ಸಾವಿರ ಖರ್ಚಾಗುತ್ತಿತ್ತು, ಯಾಂತ್ರಿಕೃತ ಬೇಸಾಯದಲ್ಲಿ ರೂ. ೧೫ ಸಾವಿರದಲ್ಲಿ ನಾಟಿ ಕೆಲಸ ಮುಗಿಯುತ್ತದೆ. ಮಾತ್ರವಲ್ಲದೆ ಈ ಯಂತ್ರವು ಒಂದು ಗಂಟೆ ಅವಽಯಲ್ಲಿ ಒಂದು ಎಕರೆ ನಾಟಿ ಮಾಡುವುದರಿಂದ ಬೇರೆ ಕೆಲಸಗಳನ್ನು ನಿಭಾಯಿಸಲು ಸಮಯವೂ ಉಳಿಯುತ್ತಿದೆ. ?– ಸಜನ್ ದೇವಯ್ಯ, ಯಂತ್ರ ಕೃಷಿ ಬೇಸಾಯ ಮಾಡಿದ ರೈತ ಬಾಳೆಲೆ.
೨೦೦೪ರಲ್ಲಿ ಜಿಲ್ಲೆಯಲ್ಲಿ ೩೬ ರಿಂದ ೪೦ ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಪ್ರಸ್ತುತ ೧೬ ರಿಂದ ೧೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಬೆಳೆಯನ್ನು ಬೆಳೆಸಲಾಗುತ್ತಿದೆ. ಆರ್ಥಿಕ ಬೆಳೆಗಳಾದ ಕಾಫಿ, ಕರಿಮೆಣಸು, ಶುಂಠಿ ಬೆಳೆಗಳಿಗೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೆ,ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಯಿಂದ ಲಾಭದೊಂದಿಗೆ ಅಂತರ್ಜಾಲ ಮಟ್ಟ ವೃದ್ಧಿಯಾಗುತ್ತದೆ. ? ಡಾ. ವೀರೇಂದ್ರ ಕುಮಾರ್ ಕೆ. ವಿ, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ), ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು