ಮೈಸೂರು ನಗರದ ಹೃದಯಭಾಗದಲ್ಲಿರುವ ಜಗನ್ಮೋಹನ ಅರಮನೆಯಲ್ಲಿ ವಾರಕ್ಕೆ ೨-೩ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮೊದಲ ಎರಡು-ಮೂರು ಸಾಲುಗಳಲ್ಲಿ ಇರುವ ಫ್ಯಾನ್‌ಗಳು ಯಾವಾಗಲೂ ಕಾರ್ಯನಿರ್ವಹಿಸದೇ ತೊಂದರೆಯಾಗಿದೆ. ಸಾಮಾನ್ಯವಾಗಿ ಈ ಸಾಲಿನಲ್ಲಿ ಗಣ್ಯಾತಿಗಣ್ಯರು ಆಸೀನರಾಗುತ್ತಾರೆ.
ಇದನ್ನೂ ಓದಿ:- ಓದುಗರ ಪತ್ರ: ಶುದ್ಧ ನೀರಿನ ಘಟಕಗಳಲ್ಲಿ ನಗದು
ಈಗ ಬೇಸಿಗೆ ಸಮಯವಾದ್ದರಿಂದ ಫ್ಯಾನ್ ಇಲ್ಲದೇ ಗಂಟೆಗಟ್ಟಲೇ ಸೆಕೆಯಲ್ಲೇ ಕೂರುವ ಪರಿಸ್ಥಿತಿ ಉಂಟಾಗಿದೆ. ಕೊನೇ ಪಕ್ಷ ಏರ್ ಕೂಲರ್‌ಅನ್ನು ಅಳವಡಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ. ಕಾರ್ಯಕ್ರಮ ಇರಲಿ ಅಥವಾ ಇಲ್ಲದಿರಲಿ ಆಗಿಂದಾಗ್ಗೆ ಈ ಸಭಾಂಗಣವನ್ನು ಸ್ವಚ್ಛಗೊಳಿಸಬೇಕು. ಹಾಗೂ ಇಡೀ ಸಭಾಂಗಣಕ್ಕೆ ಕುಶನ್ ಇರುವ ಆಸನಗಳನ್ನು ಅಳವಡಿಸಬೇಕು. ಕಾರ್ಯಕ್ರಮದ ಆಯೋಜಕರು ಅಥವಾ ವ್ಯವಸ್ಥಾಪಕರು ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲ, ಮೈಸೂರು





