ಈ ಬಾರಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಳೆದ ಬಾರಿ ಯುವ ದಸರಾ ಕಾರ್ಯಕ್ರಮವನ್ನು ಮೈಸೂರಿನಿಂದ ಹೊರಗೆ ಉತ್ತನಹಳ್ಳಿಯಲ್ಲಿ ಏರ್ಪಡಿಸಲಾಗಿತ್ತು.ಇದರಿಂದ ನಗರದ ಜನರಿಗೆ ಕಾರ್ಯಕ್ರಮ ವೀಕ್ಷಣೆಗೆ ಹೋಗಲು ಸಾಧ್ಯವಾಗಲಿಲ್ಲ. ಇಷ್ಟು ವರ್ಷಗಳೂ ಯುವ ದಸರಾ ಕಾರ್ಯಕ್ರಮವನ್ನು ಮೈಸೂರಿನ ಸ್ಥಳೀಯ ವಾಹಿನಿಗಳು ನೇರ ಪ್ರಸಾರ ಮಾಡುತ್ತಿದ್ದವು. ಇದರಿಂದ ಕಾರ್ಯಕ್ರಮಕ್ಕೆ ಹೋಗಲಾಗದವರು, ಹಿರಿಯರು, ಹೆಂಗಸರು, ಮಕ್ಕಳು ಮನೆಯಲ್ಲೇ ಕುಳಿತು ನೇರ ಪ್ರಸಾರದಲ್ಲಿ ವೀಕ್ಷಿಸಿ ಆನಂದಿಸುತ್ತಿದ್ದರು. ಆದರೆ ಕಳೆದ ಬಾರಿ ಆಯೋಜಕರು ಯುವ ದಸರಾ ನೇರ ಪ್ರಸಾರದ ಹಕ್ಕನ್ನು ಖಾಸಗಿ ಸಂಸ್ಥೆಗೆ ನೀಡಿದ್ದ ಕಾರಣಕ್ಕೆ ಜನರು ನೇರ ಪ್ರಸಾರ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಯುವ ದಸರಾ ಆಯೋಜಿಸಲು ಸರ್ಕಾರ ನೀಡುವ ಹಣ ಜನರ ತೆರಿಗೆಯ ಹಣವಾಗಿದೆ. ಆದ್ದರಿಂದ ಈ ಬಾರಿ ಅಂತಹ ಲೋಪವಾಗದಂತೆ, ಯಾರಿಗೂ ಹಕ್ಕನ್ನು ನೀಡದೇ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರ ಮಾಡಲು ಜಿಲ್ಲಾಡಳಿತ, ಸರ್ಕಾರ ಅನುಮತಿ ನೀಡಲಿ. ಈ ಬಗ್ಗೆ ಉಸ್ತುವಾರಿ ಸಚಿವರು ಗಮನಹರಿಸಬೇಕಿದೆ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.





