ಐಪಿಎಲ್ ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್, ರಾಯಲ್ ಚಾಲೆಂಜರ‍್ಸ್ ಬೆಂಗಳೂರು (ಆರ್‌ಸಿಬಿ) ಸೇರಿದಂತೆ ಹಲವಾರು ತಂಡಗಳೊಂದಿಗೆ ವಿಶ್ವದಾದ್ಯಂತ ತನ್ನದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಗ್ ಆಗಿದೆ.
ಕನ್ನಡಿಗರು ಮಾತ್ರವಲ್ಲದೇ ಭಾರತದಾದ್ಯಂತ ಎಲ್ಲ ಭಾಷಿಕರೂ ಇಷ್ಟಪಡುವ ನೆಚ್ಚಿನ ತಂಡವೆಂದರೆ ಅದು ಆರ್‌ಸಿಬಿ. ೨೦೦೮ ರಿಂದ ಸತತವಾಗಿ ೧೮ ವರ್ಷಗಳೂ ಭಾಗವಹಿಸಿ ಆಡಿರುವ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ೨೦೦೯, ೨೦೧೧, ೨೦೧೬ನೇ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿದರೂ ಒಂದು ಬಾರಿಯೂ ಜಯಶಾಲಿ ಆಗಿಲ್ಲ. ಕೊಹ್ಲಿ ಸೇರಿದಂತೆಹಲವಾರು ದಿಗ್ಗಜ ಆಟಗಾರರಿರುವ ಈತಂಡವನ್ನು ಬೆಂಗಳೂರಿಗರಷ್ಟೇ ಅಲ್ಲದೇ ಉಳಿದ ತಂಡಗಳ ಅಭಿಮಾನಿಗಳೂ ಇಷ್ಟಪಡುತ್ತಾರೆ. ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ೨೦೨೫ನೇ ಸಾಲಿನ ೧೮ನೇ ಆವೃತ್ತಿಯ ಫೈನಲ್ ತಲುಪಿದೆ. ಫೈನಲ್ ಪಂದ್ಯದ ಜೂ.೩ರಂದು ನಡೆಯಲಿದೆ. ಈ ಗೆಲುವು ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡಕ್ಕೆ ಒಲಿಯಲಿ ಎಂದು ಹಾರೈಸೋಣ.
-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





