Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಆತುರದ ನಿರ್ಧಾರ ಏಕೆ?

ಓದುಗರ ಪತ್ರ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ 7 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ ರೆಡ್ಡಿ ಯವರ ವಿಧಾನಸಭಾ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಿ ಅನರ್ಹ ಗೊಳಿಸಲಾಗಿತ್ತು. ಇದೀಗ ತೆಲಂಗಾಣ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡಿದ ಕಾರಣ ವಿಧಾನ ಸಭೆ ಕಾರ್ಯದರ್ಶಿಯವರು ರೆಡ್ಡಿಯವರ ಶಾಸಕತ್ವವನ್ನು ಮರು ಸ್ಥಾಪಿಸಿ ಆದೇಶ ಹೊರಡಿಸಿರುವುದಾಗಿ 22-06-2025 ರಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಆದರೆ ಸಿಬಿಐ ವಿಶೇಷ ನ್ಯಾಯಾಲಯ ತನ್ನ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಹೀಗಿದ್ದರೂ ವಿಧಾನಸಭಾ ಕಾರ್ಯದರ್ಶಿಯವರು ಆತುರವಾಗಿ ರೆಡ್ಡಿಯವರ ಸದಸ್ಯತ್ವ ವನ್ನು ತಕ್ಷಣವೇ ರದ್ದುಗೊಳಿಸಿದ್ದೇಕೆ? ಇದು ಸರ್ಕಾರಕ್ಕೆ ಮುಜುಗರ ಅಲ್ಲವೇ?

– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!