ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು ಸಾರ್ವಜನಿಕರ ಬಳಕೆಗಿರುವ ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಹಾಕಲಾಗಿದೆ. ಅದೂ ನಾಯಕ ನಟ ಯಶ್ ಬಂದೂಕನ್ನು ಹಿಡಿದಿರುವ ಪೋಸ್ಟರ್. ಉಗ್ರವಾದ ಖಂಡಿಸುವ, ಬಂದೂಕು ‘ಸಂಸ್ಕೃತಿ’ಯನ್ನು ಉಗ್ರವಾಗಿ ವಿರೋಧಿಸುವ ಮಾತುಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಸಾವಿರಾರು ಜನರು(ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಇರುತ್ತಾರೆ) ಸಂಚರಿಸುವ ಮೆಟ್ರೋದಲ್ಲಿ ಈ ರೀತಿಯ ಪೋಸ್ಟರ್ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಯೋಚಿಸಬೇಕಾಗುತ್ತದೆ. ಹಣ ಬರುತ್ತದೆ ಎಂದು ಇಂತಹ ಜಾಹೀರಾತುಗಳಿಗೆ ಪ್ರೋತ್ಸಾಹ ಕೊಡುವುದು ಸರಿಯೇ?. ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದೆ ಇಂತಹ ಜಹೀರಾತುಗಳಿಗೆ ಅವಕಾಶ ಕೊಡಬಾರದು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು



