Mysore
34
scattered clouds

Social Media

ಶನಿವಾರ, 28 ಮಾರ್ಚ್ 2026
Light
Dark

ಓದುಗರ ಪತ್ರ: ಐಪಿಎಲ್ ಬೇಕಿತ್ತೇ?

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ ಪ್ರತಿಷ್ಠೆಗಾಗಿ ನಡೆಸುತ್ತಿರುವ ಈ ಯುದ್ಧ ಸದ್ಯಕ್ಕಂತೂ ನಿಲ್ಲುವ ಸೂಚನೆಗಳು ಇಲ್ಲ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿ ಅವರು ಮುಂದಿನ ದಿನಗಳು ಕೋವಿಡ್ ದಿನಗಳ ಪರಿಸ್ಥಿತಿಗಿಂತಲೂ ಭೀಕರವಾಗಿರ ಬಹುದು, ದೇಶದ ಜನತೆ ಅದನ್ನು ಎದುರಿ ಸಲು ಸಿದ್ಧರಾಗಿರಬೇಕು ಎಂದು ಈಗಾಗಲೇ ಕರೆ ನೀಡಿದ್ದಾರೆ. ಅಲ್ಲದೆ ಕೆಲವು ಜಲತಾಣಗಳಲ್ಲಿ ದೇಶದಲ್ಲಿ ಲಾಕ್‌ಡೌನ್ ಜರಿಗೆ ಬರಬಹುದೆಂಬ ಸುದ್ದಿಯೂ ಹರಿದಾಡುತ್ತಿವೆ.

ಇಂದಿನ ಈ ಬಿಕ್ಕಟ್ಟುಗಳ ನಡುವೆ ಮಾ.೨೮ರಿಂದ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ಎಂಬ ಹೆಸರಿನಲ್ಲಿ ಸಾವಿರಾರು ಕೋಟಿಗಳ ಶ್ರೀಮಂತರ ಜೂಜಿನ ಕ್ರಿಕೆಟ್ ಆರಂಭವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಐಪಿಎಲ್ ಚಟಕ್ಕೆ ಬಿದ್ದು ಮನೆ – ಮಠ ಕಳೆದುಕೊಂಡವರಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಐಪಿಎಲ್‌ನ ಅವಶ್ಯ ಏನಿದೆ? ಈ ಎಲ್ಲದರ ನಡುವೆ ಗುರುವಾರ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಕೆಲವು ಶಾಸಕರು ನಮಗೆ ಐಪಿಎಲ್ ಫ್ರೀ ಪಾಸ್ ಕೊಡಿಸಿ ಎಂದು ಸಭಾಧ್ಯಕ್ಷರನ್ನು ಗೋಗರೆದಿರುವುದು ನಾಚಿಕೆಗೆಟ್ಟ ಸಂಗತಿ. ಪ್ರeವಂತ ನಾಗರಿಕರು ಈ ಸಲದ ಐಪಿಎಲ್‌ನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಬೇಕು.

– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು

Tags:
error: Content is protected !!