Mysore
24
overcast clouds

Social Media

ಸೋಮವಾರ, 11 ಮೇ 2026
Light
Dark

ಓದುಗರ ಪತ್ರ:  ಮತದಾರರ ಪಟ್ಟಿ ಮ್ಯಾಪಿಂಗ್; ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ

ಓದುಗರ ಪತ್ರ

ಡಿ.13, 14 ರಂದು ಮೈಸೂರಿನಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಮತದಾರರ ಪಟ್ಟಿಯ ಪರಿಶೀಲನೆಗಾಗಿ ಚಾಮುಂಡೇಶ್ವರಿ ಕ್ಷೇತ್ರ, ವಾರ್ಡ್ ನಂ. ೪೬ರ ಕನಕದಾಸನಗರ, ಜೆ.ಬ್ಲಾಕ್‌ನ ಮತಗಟ್ಟೆ ಸಂಖ್ಯೆ ೨೧೬ ಮತ್ತು ೨೧೭ ಹೊಂದಿರುವ ರೋಟರಿ ಶಾಲೆಗೆ ಡಿ.೧೪ರಂದು ಹೋದರೆ ಅಲ್ಲಿ ಗೇಟ್‌ಗೆ ಬೀಗ ಹಾಕಿತ್ತು.

ಸ್ವಚ್ಛತಾ ಕೆಲಸದ ಸಿಬ್ಬಂದಿಯೊಬ್ಬರನ್ನು ಕೇಳಿದಾಗ ಇಂದು ಶಾಲೆಗೆ ರಜೆ, ಯಾರೂ ಕೆಲಸ ನಿರ್ವಹಿಸುತ್ತಿಲ್ಲ. ನಾಳೆ ಬನ್ನಿ ಎಂದರು. ಈ ಸಂಬಂಧ ಮೈಸೂರು ಮಹಾ ನಗರಪಾಲಿಕೆ ಕಚೇರಿಯಲ್ಲಿ ವಿಚಾರಿಸಲು ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ. ಇನ್ನಾದರೂ ಸಂಬಂಧಪಟ್ಟವರು ಮತದಾರರ ಪಟ್ಟಿ ಪರಿಶೀಲನೆ ಕುರಿತು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಬೇಕು ಹಾಗೂ ಚುನಾವಣಾ ಆಯೋಗ ನಿಗದಿಪಡಿಸಿದ ಸಮಯದಲ್ಲಿ ಆಯಾ ಸ್ಥಳದಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಅಗತ್ಯವಾಗಿದೆ.

 -ಬಿ.ಎಂ.ಸುವರ್ಣ, ಕನಕದಾಸನಗರ, ಮೈಸೂರು

Tags:
error: Content is protected !!