ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ೨೩೪ ಕ್ಷೇತ್ರಗಳ ಪೈಕಿ ೧೦೮ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಹುಮತಕ್ಕೆ ಅಗತ್ಯವಾಗಿರುವ ೧೦ ಸ್ಥಾನಗಳನ್ನು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ವಿಜಯ್ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕೆ ೮ ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಪ್ರತಿ ನವಜಾತ ಶಿಶುವಿಗೆ ಚಿನ್ನದ ಉಂಗುರ ಹಾಗೂ ವರ್ಷಕ್ಕೆ ೬ ಉಚಿತ ಗ್ಯಾಸ್ ಸಿಲಿಂಡರ್ ಮೊದಲಾದ ಯೋಜನೆಗಳು ಉತ್ತಮವಾಗಿದ್ದರೂ ಈ ಯೋಜನೆಗಳಿಗೆ ಖರ್ಚಾಗುವ ಹಣವನ್ನು ಹೊಂದಿಸಲು ಸರ್ಕಾರ ಮಾಡುವ ಖರ್ಚಿನಿಂದಾಗಿ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಉಚಿತ ಯೋಜನೆಗಳಿಗೆ ಹೆಚ್ಚು ಹಣವನ್ನು ಮೀಸಲಿಡುವುದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ.
ಡಿಎಂಕೆ ಹಾಗೂ ಎಐಎಡಿಎಂಕೆ ಆಡಳಿತಕ್ಕೆ ಪರ್ಯಾಯವಾಗಿ ತಮಿಳುನಾಡು ಮತದಾರರು ಮೊದಲಬಾರಿಗೆ ಟಿವಿಕೆ ಪಕ್ಷದ ವಿಜಯ್ ಅವರಿಗೆ ಅವಕಾಶ ನೀಡಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವ ಮೂಲಕ ಜನರ ವಿಶ್ವಾಸವನ್ನು ಅವರು ಉಳಿಸಿಕೊಳ್ಳುವುದು ಅಗತ್ಯ.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು





