ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ – ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪ ಮಾಲ್ಗುಡಿ ಎಕ್ಸ್ಪ್ರೆಸ್ ಮತ್ತು ೧೨೭೮೫ ಕಾಚಿಗುಡ ಎಕ್ಸ್ಪ್ರೆಸ್, ರೈಲು ಗಾಡಿಗಳನ್ನು ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಿದರೆ ಚಾಮರಾಜಪುರಂ, ಬೋಗಾದಿ, ದಟ್ಟಗಳ್ಳಿ, ಕೆ.ಜಿ.ಕೊಪ್ಪಲು, ಸರಸ್ವತಿಪುರಂ, ವಿಜಯನಗರ ಸೇರಿದಂತೆ ಮೈಸೂರಿನ ಇನ್ನಿತರ ಭಾಗದ ಜನರಿಗೆ , ಅದರಲ್ಲೂ ಮುಖ್ಯವಾಗಿ ಪ್ರತಿನಿತ್ಯ ಬೆಂಗಳೂರಿಗೆ ತೆರಳುವ ಕೆಲಸಗಾರರಿಗೆ ಅನುಕೂಲವಾಗುತ್ತದೆ.
ಮೈಸೂರು- ಕೊಡಗು ಕ್ಷೇತ್ರದ ಸಂಸದರು ರೈಲ್ವೆ ಸಚಿವರು, ಮೈಸೂರಿನ ನೈಋತ್ಯ ರೈಲ್ವೆ ವಲಯ ಅಽಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ನಾಗೇಶ್ ,ಮಾನಸಗಂಗೋತ್ರಿ, ಮೈಸೂರು



