Mysore
22
light rain

Social Media

ಶುಕ್ರವಾರ, 23 ಅಕ್ಟೋಬರ್ 2026
Light
Dark

ಓದುಗರ ಪತ್ರ: ಈ ಸರಳತೆ ಎಲ್ಲ ರಾಜಕಾರಣಿಗಳಿಗೂ ಮಾದರಿ

ಓದುಗರ ಪತ್ರ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮೈಸೂರು ದಸರಾವನ್ನು ನೋಡಲು ಪತ್ನಿಯೊಂದಿಗೆ, ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಆಟೋದಲ್ಲಿ ಸಂಚರಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದ್ದರೆ ಇಂತಹ ಸಚಿವರು ಇರಬೇಕು ಎನಿಸುತ್ತದೆ. ಇವತ್ತಿನ ದಿನಗಳಲ್ಲಿ ಮಂತ್ರಿ ಆದ ನಂತರ ಅವರು ಹೇಗೆ ಇರುತ್ತಾರೆ ಎಂಬುದು ತಿಳಿದೇ ಇದೆ. ಇದಕ್ಕೆ ಅಪವಾದ ಎನ್ನುವಂತೆ ಕೃಷ್ಣ ಬೈರೇಗೌಡ ಅವರು ನಡೆದುಕೊಳ್ಳುತ್ತಿರುವ ರೀತಿ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಕಂದಾಯ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಇಲಾಖೆಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ನಿರ್ಧಾರಗಳಿಂದಾಗಿ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಪರಿಹಾರ ಕಾಣದೇ ಇದ್ದ, ಲಕ್ಷಾಂತರ ಪೌತಿ ಖಾತೆಗಳಿಗೆ ಮುಕ್ತಿ ದೊರೆಯಿತು. ಗ್ರಾಮೀಣ ಪ್ರದೇಶದ ರೈತರು ಇಂದಿಗೂ ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾಗೇ ಇರಬೇಕಿತ್ತು ಎಂದು ಬಯಸುತ್ತಾರೆ. ಇಂತಹ ಪ್ರಾಮಾಣಿಕ ಸಚಿವರಾಗಿzಗ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ.

 -ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!