ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿ ಎಂವಿಜಿ ಬೇಕರಿಯಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ಇರುವ ರಸ್ತೆಗೆ ಫುಟ್‌ಪಾತ್ ಅನ್ನೇ ನಿರ್ಮಿಸಿಲ್ಲ. ಈ ಮಾರ್ಗದಲ್ಲಿ ಪಾದಚಾರಿಗಳು ಹೆಚ್ಚಾಗಿ ಸಂಚರಿಸುತ್ತಿದ್ದರೂ ಅವರುಗಳಿಗೆ ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಫುಟ್‌ಪಾತ್ ಇಲ್ಲದ ಪರಿಣಾಮ ಪಾದಚಾರಿಗಳು ಕೊರಕಲು ಮಾರ್ಗದಲ್ಲೇ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ಈ ಮಾರ್ಗದಲ್ಲಿ ಪಾದಚಾರಿಗಳು ವಾಹನಗಳು ಸಂಚರಿಸುವ ಮಾರ್ಗದಲ್ಲೇ ನಡೆದುಕೊಂಡು ಹೋಗುವುದರಿಂದ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬಂತಾಗಿದೆ. ಈ ಮಾರ್ಗದಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್ ನಿರ್ಮಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
-ಸಿ.ಸಿದ್ದರಾಜು, ಆಲಕೆರೆ, ಮಂಡ್ಯ



