ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪುಟ್ಟ ಗ್ರಾಮ ಬದನವಾಳುಗೆ ೧೯೨೭ಹಾಗೂ ೧೯೩೪ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಕೈಮಗ್ಗ ಮತ್ತು ಗ್ರಾಮೋ ದ್ಯೋಗಗಳ ಮೂಲಕ ಹಿಂದುಳಿದಿದ್ದ ಗ್ರಾಮದ ಜನರ ಸ್ವಾವಲಂಬನೆಗಾಗಿ ತಗಡೂರು ರಾಮಚಂದ್ರರಾಯರ ನೇತೃತ್ವದಲ್ಲಿ ನೂಲು ನೇಯುವ ಕೈಮಗ್ಗಗಳನ್ನು ಸ್ಥಾಪಿಸಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೂ ಇದಕ್ಕೆ ಅಗತ್ಯ ಸಹಕಾರ ನೀಡಿದ್ದನ್ನು ರಾಷ್ಟ್ರಪಿತ ಗಾಂಧಿಜಿ ಅವರು ತಮ್ಮ ಯಂಗ್ ಇಂಡಿಯ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆಂದೋಲನ ಪತ್ರಿಕೆಯ ಸಾಪ್ತಾಹಿಕ ಪುರವಣಿ ಹಾಡುಪಾಡು (ಜ.೪ರಂದು) ನಲ್ಲಿ ಬದನವಾಳುವಿನ ಗ್ರಾಮ ಸ್ವರಾಜ್ಯದ ಬಗ್ಗೆ ಬೆಳಕು ಚೆಲ್ಲುವ ಲೇಖನ ಪ್ರಕಟಿಸುವ ಮೂಲಕ ಆ ನೆನಪನ್ನು ಸ್ಮರಿಸಿರುವುದು ಶ್ಲಾಘನೀಯ.
– ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು





