Mysore
18
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಓದುಗರ ಪತ್ರ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆದದ್ದೇ ವಿರಳ ಎನ್ನುವಂತಿದೆ.

ಆಡಳಿತ ಪಕ್ಷಕ್ಕೆ ಬಹುಮತವಿರುವುದರಿಂದ ಉಭಯ ಸದನಗಳಲ್ಲೂ ಮಸೂದೆ ಸುಲಭವಾಗಿ ಅಂಗೀಕಾರವಾಗುತ್ತದೆ. ಸದನದಲ್ಲಿ ಸರ್ಕಾರದ ಮಸೂದೆಗಳ ಬಗ್ಗೆ ವಿರೋಧ ಪಕ್ಷಗಳು ಚರ್ಚೆ ನಡೆಸಬೇಕು. ಆದರೆ ಯಾವುದೋ ಸಂಬಂಧಪಡದ ವಿಷಯಗಳನ್ನು ಹಿಡಿದು ಚರ್ಚೆಗೆ ಒತ್ತಾಯಿಸುವುದು, ಸರ್ಕಾರ ಒಪ್ಪದಿದ್ದರೆ, ಸದನದಿಂದ ಹೊರ ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಯಾವುದೇ ಚರ್ಚೆ ಇಲ್ಲದೆ ಧ್ವನಿ ಮತದ ಮೂಲಕ ಮಸೂದೆ ಪಾಸು ಮಾಡುವ ವ್ಯವಸ್ಥೆ ಸರ್ಕಾರಕ್ಕೆ ವರದಾನವಾಗಿದೆ.

ಸದಸ್ಯರು ಸದನಕ್ಕೆ ಹಾಜರಾಗಿ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ನಂತರ ಸದನದಿಂದ ಹೊರ ನಡೆಯುತ್ತಾರೆ. ಅಧಿವೇಶನಗಳು ಮಸೂದೆ ಅಂಗೀಕಾರಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

-ಮುಳ್ಳೂರು ಪ್ರಕಾಶ, ಕನಕದಾಸ ನಗರ, ಮೈಸೂರು

Tags:
error: Content is protected !!