ಇಂದಿನ ಆರೋಗ್ಯ ಕ್ಷೇತ್ರದಲ್ಲಿ ಚಿಕಿತ್ಸೆಗಾಗಿ ವಿಮಾ ಸೌಲಭ್ಯವಿದ್ದರೂ ರೋಗಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಖಾಸಗಿ ಆಸ್ಪತ್ರೆಗಳು ವಿಮಾ ಸೌಲಭ್ಯ ಹೊಂದಿರುವ ರೋಗಿಗಳಿಂದ ನಗದು ಪಾವತಿಸುವವರಿಗಿಂತ ಶೇ.೬೦ರಿಂದ ೮೦ರಷ್ಟು ಹೆಚ್ಚಿನ ಬಿಲ್ ವಸೂಲಿ ಮಾಡಿ ಸುಲಿಗೆ ಮಾಡುತ್ತಿವೆ. ಅನಗತ್ಯ ರಕ್ತ ಪರೀಕ್ಷೆಗಳು, ಸ್ಕ್ಯಾನಿಂಗ್ಗಳು ಹಾಗೂ ಕೊಠಡಿಯ ಬಾಡಿಗೆಯ ಹೆಸರಿನಲ್ಲಿ ರೋಗಿಯ ಜೇಬಿಗೆ ಕನ್ನ ಹಾಕಲಾಗುತ್ತಿದೆ. ಅಲ್ಲದೆ ‘ನಾನ್ ಮೆಡಿಕಲ್ ಐಟಂ’ಗಳ ನೆಪದಲ್ಲಿ ಶೇ.೨೫ರಷ್ಟು ವೆಚ್ಚವನ್ನು ವಿಮಾ ಕಂಪೆನಿಗಳು ಭರಿಸದೆ ಸಂಪೂರ್ಣ ಹೊರೆಯನ್ನು ರೋಗಿಯ ಮೇಲೆಯೇ ಹಾಕುತ್ತಿವೆ. ಈ ದಂಧೆಗೆ ತಡೆ ಹಾಕಲು ಸರ್ಕಾರ ಹಾಗೂ ವಿಮಾ ನಿಯಂತ್ರಣ ಪ್ರಾಽಕಾರ (ಐಆರ್ಡಿಎ) ತಕ್ಷಣವೇ ಕಟ್ಟುನಿಟ್ಟಿನ ನಿಯಮಗಳನ್ನು ತರಬೇಕು. ಪ್ರತಿಯೊಂದು ಆಸ್ಪತ್ರೆಯಲ್ಲೂ ‘ರಾಷ್ಟ್ರೀಯ ಚಿಕಿತ್ಸಾ ವೆಚ್ಚ ಸೂಚಿ’ ಹಾಗೂ ಬಾರ್ಕೋಡ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಪಾರದರ್ಶಕತೆ ತರಬೇಕಿದೆ.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು




