Mysore
27
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಓದುಗರ ಪತ್ರ: ಹಿಂದಿ ಹೇರಿಕೆ ನಿಲ್ಲಲ್ಲಿ

ಭಾರತೀಯ ಜೀವ ವಿಮಾ ನಿಗಮದ ವೆಬ್‌ಸೈಟ್ ಹಿಂದಿ ಮಯವಾಗಿದ್ದು, ಕೇಂದ್ರ ಸರ್ಕಾರ ತನ್ನ ಅಧೀನ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹಿಂದಿ ಹೇರಿಕೆಯ ಸಾಧನವಾಗಿ ಬಳಸುತ್ತಿದೆಯೇನೋ ಅನಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ಹಿಂದಿ ಬಿಟ್ಟರೆ ಇಂಗ್ಲಿಷ್‌ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಆಯ್ಕೆಗೆ ಅವಕಾಶವಿಲ್ಲದಿರುವುದು ದೇಶದ ಭಾಷಾ ವೈವಿಧ್ಯತೆಯನ್ನು ಕಡೆಗಣಿಸಿದಂತಾಗಿದೆ. ಎಲ್‌ಐಸಿಯ ಈ ನಡೆಯನ್ನು ಖಂಡಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಎಚ್ಚೆತ್ತುಕೊಂಡ ಭಾರತೀಯ ಜೀವ ವಿಮಾ ನಿಗಮವು ‘ಇದು ತಾಂತ್ರಿಕ ದೋಷವಾಗಿದ್ದು, ಇದರ ಹಿಂದೆ ಹಿಂದಿ ಹೇರುವ ಯಾವುದೇ ಉದ್ದೇಶವಿಲ್ಲ’ ಎಂದು ಸ್ಪಷ್ಟೀಕರಣ ನೀಡಿದೆ. ತಮಿಳುನಾಡಿನ ಮಾಧ್ಯಮಗಳು ಇದನ್ನು ಹಿಂದಿ ಹೇರಿಕೆ ಎಂದೇ ಬಿಂಬಿಸಿ ಸುದ್ದಿ ಬಿತ್ತರಿಸಿದವು. ತಮಿಳುನಾಡಿನ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಂಸದರೂ ಹಾಗೂ ಜನಸಾಮಾನ್ಯರೂ ಈ ಬಗ್ಗೆ ಸಂಘಟಿತ ಹೋರಾಟ ಮಾಡಿದರು. ಪರಿಣಾಮ ನಿಗಮ ತನ್ನ ನಡೆಯನ್ನು ಬದಲಿಸಿಕೊಂಡಿದೆ. ಇಂಥಹ ಸಂಘಟಿತ ಪ್ರತಿಕ್ರಿಯೆಗಳು ನಮ್ಮ ಕರ್ನಾಟಕದಲ್ಲಿಯೂ ಆಗಬೇಕು. ಆಗ ಮಾತ್ರ ಸ್ಥಳೀಯ ಭಾಷೆಗಳ ಉಳಿವು ಸಾಧ್ಯ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.

Tags: