ಬೇಡ ಒಡಕು ವಿಘಟನೆ!
ಸಾಮಾಜಿಕ ಜಾಲತಾಣಗಳೀಗ
ಸುಳ್ಳು ಸುದ್ದಿಗಳ ತಾಣಗಳಾಗಿವೆಯಂತೆ
ನೋವು ವಿಷಾದದ ಸಂಗತಿಯಿದು!
ದ್ವೇಷಭಾಷಣ ಸುಳ್ಳುಸುದ್ದಿಗಳ
ಕಲ್ಲು ಮುಳ್ಳನು ಎಸೆದು
ಜನಮಾನಸ
ಸರೋವರವನು
ಕದಡಿ ಬಗ್ಗಡ
ಮಾಡುವುದು ತರವಲ್ಲ!
ಬೆಂಕಿ ಹಚ್ಚುವುದು ಸುಲಭ
ಆರಿಸುವುದು ಕಡುಕಷ್ಟ!
ಬೇಡ ಒಡಕು ವಿಘಟನೆ
ಇರಲಿ ಪ್ರೀತಿ ಸಹನೆ ಸಾಮರಸ್ಯ!
ಇದುವೆ ಬಾಳಬಂಡಿಯ ರಹಸ್ಯ
– ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ೩ನೇ ಹಂತ ಮೈಸೂರು





